ನಗ್ನ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತೇವೆ ಎಂಬ ಬೆದರಿಕೆಗೆ ಹೆದರಿ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಒಬ್ಬ ಬರೋಬ್ಬರಿ 16 ಲಕ್ಷ ರೂಪಾಯಿಯನ್ನ ಕಳೆದುಕೊಂಡಿದ್ದಾರೆ.
ಡಿಸೆಂಬರ್ 3ರಂದು ಸಂತ್ರಸ್ತ ವ್ಯಕ್ತಿ ಡೇಟಿಂಗ್ ಅಪ್ಲಿಕೇಶನ್ ಮೂಲಕ ಶ್ವೇತಾ ಎಂಬಾಕೆಯನ್ನ ಭೇಟಿಯಾಗಿದ್ದರು ಹಾಗೂ ಆಕೆ ಇಂಜಿನಿಯರ್ ಬಳಿ 2000 ರೂಪಾಯಿಯನ್ನ ಆನ್ಲೈನ್ ಪೇಮೆಂಟ್ ಮಾಡುವಂತೆ ಹೇಳಿದ್ದಳು.
ಈ ಶ್ವೇತಾ ಇಂಜಿನಿಯರ್ಗೆ ತನ್ನ ಗೆಳತಿ ನಿಖಿತಾ ಎಂಬವಳ ಮೊಬೈಲ್ ನಂಬರ್ನ್ನು ನೀಡಿದ್ದಾಳೆ. ನಿಖಿತಾ ವಿಡಿಯೋ ಕಾಲ್ ಮಾಡಿ ಇಂಜಿನಿಯರ್ಗೆ ನಗ್ನ ದೇಹವನ್ನ ತೋರಿಸಿ ಕಾಲ್ ರೆಕಾರ್ಡ್ ಮಾಡಿದ್ದಾಳೆ. ಇದಾದ ಬಳಿಕ ಇಂಜಿನಿಯರ್ಗೆ ಬೆದರಿಕೆ ಕರೆಗಳು ಬರೋಕೆ ಆರಂಭವಾಗಿದೆ. ಹಣ ಪಾವತಿ ಮಾಡದೇ ಇದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡೋದಾಗಿ ಪ್ರೀತಿ ಅಗರ್ವಾಲ್ ಹಾಗೂ ಶೆರಿನ್ ಎಂಬ ಇಬ್ಬರು ಮಹಿಳೆಯರು ಬೆದರಿಕೆ ಹಾಕಿದ್ದರು ಅಂತಾ ಟೆಕ್ಕಿ ಹೇಳಿದ್ದಾರೆ.
ನಾನು ಡಿಸೆಂಬರ್ 3 ಹಾಗೂ ಡಿಸೆಂಬರ್ 13ನೇ ತಾರೀಖಿನ ನಡುವೆ ವಿವಿಧ ಆನ್ಲೈನ್ ವೇದಿಕೆಯ ಮೂಲಕ 16 ಲಕ್ಷ ರೂಪಾಯಿ ಪಾವತಿ ಮಾಡಿದ್ದೇನೆ ಅಂತಾ ಟೆಕ್ಕಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಶಂಕಿತರ ಪತ್ತೆಗೆ ಬಲೆ ಬೀಸಿದ್ದಾರೆ.