alex Certify ಎಂಬಿಎ ಪದವೀಧರನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​:‌ ಬೆತ್ತಲೆ ವಿಡಿಯೋ ಲೀಕ್​ ಆಗುತ್ತೆ ಅಂತಾ ಸೂಸೈಡ್​ ಮಾಡಿಕೊಂಡಿದ್ದ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂಬಿಎ ಪದವೀಧರನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​:‌ ಬೆತ್ತಲೆ ವಿಡಿಯೋ ಲೀಕ್​ ಆಗುತ್ತೆ ಅಂತಾ ಸೂಸೈಡ್​ ಮಾಡಿಕೊಂಡಿದ್ದ ಯುವಕ…!

ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 26 ವರ್ಷದ ಎಂಬಿಎ ಪದವೀಧರ ಕೆ.ಆರ್.​ಪುರಂನ ಭಟ್ಟರಹಳ್ಳಿ ನಿವಾಸದಲ್ಲಿ ಮಾರ್ಚ್ 23ರಂದು ನೇಣಿಗೆ ಶರಣಾಗಿದ್ದ. ಈತ ಯಾವುದೇ ಸೂಸೈಡ್​ ಪತ್ರವನ್ನ ಬರೆಯದ ಕಾರಣ ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಆದರೆ ಆತನಿಗೆ ಫೇಸ್​ಬುಕ್​ನಲ್ಲಿ ಸೈಬರ್​ ಬೆದರಿಕೆ ಬಂದಿತ್ತು ಎಂಬ ವಿಚಾರವನ್ನ ಮೃತ ವ್ಯಕ್ತಿಯ ಹಿರಿಯ ಸಹೋದರಿ ಪತ್ತೆ ಮಾಡಿದ್ದಾರೆ.

ವ್ಯಕ್ತಿ ಸಾವನ್ನಪ್ಪುವ ಒಂದು ದಿನದ ಮೊದಲು ಆತನ ಬಳಿಯಿಂದ 36 ಸಾವಿರ ರೂಪಾಯಿಯನ್ನ ವಸೂಲಿ ಮಾಡಲಾಗಿದೆ. ನೇಹಾ ಶರ್ಮಾ ಎಂಬ ಯುವತಿಯ ಹೆಸರಲ್ಲಿ ಬಂದಿದ್ದ ಫ್ರೆಂಡ್​ಶಿಪ್​ ರಿಕ್ವೆಸ್ಟ್​​ನ್ನು ಆತ ಸ್ವೀಕರಿಸಿದ್ದ. ಬಳಿಕ ಇಬ್ಬರೂ ಚಾಟ್​ ಮಾಡಲು ಆರಂಭಿಸಿದ್ದರು. ಒಂದು ದಿನ ಮೃತ ಯುವಕನಿಗೆ ವಿಡಿಯೋ ಕಾಲ್​ ಮಾಡಿ ಆಕೆ ತನ್ನ ಬಟ್ಟೆಯನ್ನ ಬಿಚ್ಚಿ ನಗ್ನವಾಗಿದ್ದು ಮಾತ್ರವಲ್ಲದೇ ಆತನ ಬಳಿಯೂ ನಗ್ನನಾಗುವಂತೆ ಹೇಳಿದ್ದಳು. ಮೃತ ವ್ಯಕ್ತಿ ಯುವತಿಯ ಮಾತನ್ನ ಕೇಳಿದ ಬಳಿಕ ಸಮಸ್ಯೆ ಶುರುವಾಗಿದೆ.

ಚಾಟ್​ ಹಿಸ್ಟರಿ, ವಿಡಿಯೋ ಕಾಲ್​ ರೆಕಾರ್ಡ್​ಗಳನ್ನ ಬಳಸಿಕೊಂಡು ಈ ಸೈಬರ್​ ಕ್ರಿಮಿನಲ್ಸ್ ಮೃತ ವ್ಯಕ್ತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದೇ ಹೋದಲ್ಲಿ ಸ್ನೇಹಿತರಿಗೆ ವಿಡಿಯೋ ಕಳಿಸೋದಾಗಿ ಬೆದರಿಕೆಯೊಡ್ಡಿದ್ದಾರೆ. ಸ್ನೇಹಿತರಿಂದ ಹಣವನ್ನ ಸಾಲದ ರೂಪದಲ್ಲಿ ಪಡೆದಿದ್ದ ಯುವಕ ಭಯದಿಂದ ಡಿಜಿಟಲ್​ ಪೇಮೆಂಟ್​ ಮೂಲಕ ಈ ತಂಡಕ್ಕೆ 36 ಸಾವಿರ ರೂಪಾಯಿ ನೀಡಿದ್ದಾನೆ.

ಮೃತ ಯುವಕನ ಸಹೋದರಿ ನೀಡಿದ ದೂರನ್ನ ಆಧರಿಸಿ ಕೆ.ಆರ್. ​ಪುರಂ ಪೊಲೀಸರು ಏಪ್ರಿಲ್​ ಮೂರರಂದು ಐವರು ಶಂಕಿತರ ವಿರುದ್ಧ ಕೇಸ್​ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್​ 23ರಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ ಬಳಿಕ ಮೃತ ಯುವಕನ ಸ್ನೇಹಿತರು ಆತನ ಸಹೋದರಿಯ ಬಳಿ ಈತ ಸಾಲ ಪಡೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲ್ಲೇನೋ ಗೊಂದಲ ಇದೆ ಎಂಬುದನ್ನ ಅರಿತ ಸಹೋದರಿ ಬ್ಯಾಂಕ್​ಗೆ ತೆರಳಿ ಸಹೋದರನ ಖಾತೆಯ ವ್ಯವಹಾರವನ್ನ ಪರಿಶೀಲಿಸಿದ್ದಾರೆ. ಈ ವೇಳೆ ಮಾರ್ಚ್ 22ರಂದು ನಡೆದ 6 ವ್ಯವಹಾರಗಳು ಬೆಳಕಿಗೆ ಬಂದಿದೆ. ಇದಾದ ಬಳಿಕ ಸಹೋದರನ ಮೆಸೆಂಜರ್​​ನಲ್ಲಿ ನೇಹಾ ಶರ್ಮಾ ಎಂಬ ಹೆಸರಿನಲ್ಲಿ ಬರುತ್ತಿದ್ದ ಮೆಸೇಜ್​ಗಳನ್ನ ನೋಡಿದ್ದಾರೆ.

ಆ ವ್ಯಕ್ತಿ ನನ್ನ ಸಹೋದರನ ಮೊಬೈಲ್​ ನಂಬರ್​ ಕೇಳಿದ್ದ. ನಾನು ನನ್ನ ಅಳಿಯನ ಮೊಬೈಲ್​ ಸಂಖ್ಯೆಯನ್ನ ನೀಡಿ ನನ್ನ ತಮ್ಮನ ನಂಬರ್​ ಎಂದು ಹೇಳಿದ್ದೆ. ಆ ವ್ಯಕ್ತಿ ತನ್ನನ್ನ ತಾನು ತೇಜಸ್​ ರಮೇಶ್​ ಭಾಯ್​ ಎಂದು ಗುರುತಿಸಿಕೊಂಡಿದ್ದ. ಈತ ನೇಹಾ ಶರ್ಮಾರ ಸಹೋದರ. ನನ್ನ ಅಳಿಯನಿಗೆ ಮೆಸೇಜ್​ ಮಾಡಿದ ಈ ತಂಡ ಬ್ಲಾಕ್​ ಮಾಡಿದ್ದಾರೆ ಎಂದು ಪೊಲೀಸ್​ ದೂರಿನಲ್ಲಿ ಬರೆಯಲಾಗಿದೆ.

21 ಸಾವಿರ ರೂಪಾಯಿ ನೀಡಿದರೆ ಎಲ್ಲಾ ವಿಡಿಯೋಗಳನ್ನ ಡಿಲೀಟ್​ ಮಾಡೋದಾಗಿ ನನ್ನ ಸೋದರಳಿಯನಿಗೆ ಭರವಸೆ ನೀಡಿದ್ದಾರೆ. ರಮೇಶ್​ ಹೇಳಿಕೊಂಡಿರುವಂತೆ ಶರ್ಮಾಗೆ ಮೋಯಿನ್​ ಖಾನ್​, ಜಾವೇದ್​​ ಹಾಗೂ ರಾಬಿನ್ ಖಾನ್​ ಎಂಬ ಮ್ಯಾನೇಜರ್​ ಇದ್ದಾರೆ. ಪೊಲೀಸರು ಐವರ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಇದೀಗ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...