alex Certify ತವರು ಮನೆಗೆ ಹೋಗಿ ಬಂದ ಮಹಿಳೆಗೆ ಗಂಡನಿಂದ ʼಬಿಗ್ ಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತವರು ಮನೆಗೆ ಹೋಗಿ ಬಂದ ಮಹಿಳೆಗೆ ಗಂಡನಿಂದ ʼಬಿಗ್ ಶಾಕ್ʼ

ಬೆಂಗಳೂರು: ತವರು ಮನೆಗೆ ಹೋಗಿದ್ದ ಪತ್ನಿ ಮೂರು ತಿಂಗಳ ನಂತರ ವಾಪಸ್ಸಾಗಿದ್ದು ಆಕೆಯನ್ನು ಮನೆಗೆ ಸೇರಿಸದೆ ಗಂಡ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.

ಬೆಂಗಳೂರು ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಿಳೆ ಮೂರು ತಿಂಗಳ ಹಿಂದೆ ಛತ್ತಿಸ್ ಗಢಕ್ಕೆ ತೆರಳಿದ್ದರು. ಲಾಕ್ಡೌನ್ ಜಾರಿಯಾಗಿದ್ದರಿಂದ ಆಕೆಗೆ ವಾಪಸ್ ಬರಲು ಸಾಧ್ಯವಾಗಿರಲಿಲ್ಲ. ಮೂರು ತಿಂಗಳ ನಂತರ ಮನೆಗೆ ಬಂದ ಆಕೆಯನ್ನು ಪತಿ ಸೇರಿಸಿಕೊಂಡಿಲ್ಲ.

14 ದಿನ ಕ್ವಾರಂಟೈನ್ ಮುಗಿಸಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದಾಗಿ ಹೇಳಿದರೂ ಕೇಳದ ಗಂಡ ಮನೆಯ ಬಾಗಿಲು ತೆಗೆದಿಲ್ಲ. ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಮನೆಗೆ ಬೀಗ ಹಾಕಿಕೊಂಡು ಪತಿ ಪರಾರಿಯಾಗಿದ್ದಾನೆ. ಸದ್ಯ ಸಂಬಂಧಿಕರ ಮನೆಯಲ್ಲಿರುವ ಮಹಿಳೆಗೆ ಕೊರೋನಾ ಪರೀಕ್ಷೆ ಮಾಡಿಸಲು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...