alex Certify ಬೆಂಗಳೂರು 994: ರಾಜ್ಯದಲ್ಲಿ 19 ಸಾವಿರ ಗಡಿ ದಾಟಿದ ಸಂಖ್ಯೆ, 8805 ಡಿಸ್ಚಾರ್ಜ್ – 10 ಸಾವಿರಕ್ಕೂ ಹೆಚ್ಚು ಆಕ್ಟಿವ್ ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು 994: ರಾಜ್ಯದಲ್ಲಿ 19 ಸಾವಿರ ಗಡಿ ದಾಟಿದ ಸಂಖ್ಯೆ, 8805 ಡಿಸ್ಚಾರ್ಜ್ – 10 ಸಾವಿರಕ್ಕೂ ಹೆಚ್ಚು ಆಕ್ಟಿವ್ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 1694 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 19 ಸಾವಿರ ಗಡಿ ದಾಟಿದೆ. ಒಟ್ಟು ಸೋಂಕಿತರ ಸಂಖ್ಯೆ 19,710 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇದುವರೆಗೆ 8805 ಮಂದಿ ಬಿಡುಗಡೆಯಾಗಿದ್ದು, 10,608 ಪ್ರಕರಣಗಳಿವೆ. 201 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 994 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 7173 ಕ್ಕೆ ಏರಿಕೆಯಾಗಿದೆ. ಇಂದು 197 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 770 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 6297 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ ರಾಜಧಾನಿಯಲ್ಲಿ 105 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕಳೆದ 7 ದಿನಗಳಿಂದ ಪ್ರತಿದಿನ 500 ಕ್ಕಿಂತ ಕೇಸ್ ದಾಖಲಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...