alex Certify ಒಂದೇ ದಿನ 738 ಮಂದಿಗೆ ಸೋಂಕು ದೃಢ: 3427 ಆಕ್ಟಿವ್ ಕೇಸ್ – ಕೊರೋನಾಗೆ ತತ್ತರಿಸಿದ ಬೆಂಗಳೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನ 738 ಮಂದಿಗೆ ಸೋಂಕು ದೃಢ: 3427 ಆಕ್ಟಿವ್ ಕೇಸ್ – ಕೊರೋನಾಗೆ ತತ್ತರಿಸಿದ ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಕೂಡ ಕೊರೋನಾ ಸ್ಪೋಟವಾಗಿದ್ದು, ಬರೋಬ್ಬರಿ 738 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಒಟ್ಟು ಸೋಂಕಿತರ ಸಂಖ್ಯೆ 4052 ಕ್ಕೆ ಏರಿಕೆಯಾಗಿದ್ದು, ಇಂದು ಒಬ್ಬರೂ ಕೂಡ ಡಿಸ್ಚಾರ್ಜ್ ಆಗಿಲ್ಲ. ಇದುವರೆಗೂ 533 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 3427 ಸಕ್ರಿಯ ಪ್ರಕರಣಗಳಿದ್ದು ಕೊರೋನಾದಿಂದ ಇದುವರೆಗೆ 91 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಜೂನ್ 19 ರಂದು 138, ಜೂನ್ 20 ರಂದು 94, ಜೂನ್ 21 ರಂದು 196, ಜೂನ್ 22 ರಂದು 126, ಜೂನ್ 23 ರಂದು 107, ಜೂನ್ 24 ರಂದು 173, ಜೂನ್ 25 ರಂದು 113, ಜೂನ್ 26 ರಂದು 144, ಜೂನ್ 27 ರಂದು 596, ಜೂನ್ 28 ರಂದು 783, ಜೂನ್ 29 ರಂದು 738 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...