alex Certify ಬೆಂಗಳೂರು ಒಂದೇ ಏರಿಯಾದ 9 ಮಂದಿಗೆ ಕೊರೋನಾ ದೃಢ, ಐಸಿಯುನಲ್ಲಿ ಐವರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಒಂದೇ ಏರಿಯಾದ 9 ಮಂದಿಗೆ ಕೊರೋನಾ ದೃಢ, ಐಸಿಯುನಲ್ಲಿ ಐವರು

ಬೆಂಗಳೂರು: ರಾಜ್ಯದಲ್ಲಿ ಇಂದು 18 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಇಂದು ಒಟ್ಟು 10 ಜನರಿಗೆ ಸೋಂಕು ತಗಲಿದೆ.

ಸೋಂಕಿತರಲ್ಲಿ 145 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 17 ಮಂದಿ ಸಾವನ್ನಪ್ಪಿದ್ದಾರೆ. 283 ಸೋಂಕಿತರಲ್ಲಿ ಐವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆಂಗಳೂರು 10, ವಿಜಯಪುರ 2, ಮಂಡ್ಯ 2, ಧಾರವಾಡ 2, ದಕ್ಷಿಣಕನ್ನಡ, ಕಲಬುರ್ಗಿ ಜಿಲ್ಲೆಯ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 101 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬೆಂಗಳೂರಿನ 10 ಜನರಿಗೆ ಸೋಂಕು ದೃಢಪಟ್ಟಿದೆ. 9 ಸೋಂಕಿತರು ಬೆಂಗಳೂರಿನ ಹೊಂಗಸಂದ್ರದಲ್ಲಿ ವಾಸವಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...