alex Certify ವೀಕೆಂಡ್ ಗೆ ಪ್ಲಾನ್ ಮಾಡಿ..! ಅದಕ್ಕೂ ಮೊದಲು ಲೆಕ್ಕ ಕ್ಲಿಯರ್ ಮಾಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀಕೆಂಡ್ ಗೆ ಪ್ಲಾನ್ ಮಾಡಿ..! ಅದಕ್ಕೂ ಮೊದಲು ಲೆಕ್ಕ ಕ್ಲಿಯರ್ ಮಾಡಿ..!

ಲಾಕ್‌ಡೌನ್‌ನಿಂದಾಗಿ ಸಿಲಿಕಾನ್ ಸಿಟಿ ಮಂದಿ ಬೇಸತ್ತು ಹೋಗಿದ್ದಾರೆ. ಕೊರೊನಾ ಹರಡುವ ಭಯದಿಂದ ಮನೆಯಲ್ಲಿಯೇ ಉಳಿಯುವಂತಾಗಿದೆ. ಯಾವಾಗಪ್ಪಾ ಮುಗಿಯುತ್ತೆ ಈ ಲಾಕ್‌ಡೌನ್, ಕೊರೊನಾದಿಂದಾಗಿ ನಾವು ಯಾವಾಗ ಮುಕ್ತ ಆಗುತ್ತೇವೆ ಅಂತಾ ಜನ ತಮ್ಮಲ್ಲೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದಾರೆ.

ಹೀಗಿರುವಾಗ ಲಾಕ್‌ಡೌನ್‌ನಿಂದ ಬೇಸತ್ತ ಜನರಿಗೆ ಒಂದು ಖುಷಿ ವಿಚಾರ ತಿಳಿಸಿದ್ದರು ಬೆಂಗಳೂರು ಪೊಲೀಸರು. ಅದೇನು ಎಂದರೆ ಬೆಂಗಳೂರು ಸಿಟಿ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಒಂದು ಪೋಸ್ಟ್ ಅನ್ನು ನಿನ್ನೆ ಹಾಕಲಾಗಿತ್ತು.

ಎಲ್ಲರೂ ವೀಕೆಂಡ್ ಪ್ಲಾನ್ ಮಾಡಿಕೊಳ್ಳಿ ಅಂತೇಳಿ ಒಂದಿಷ್ಟು ಸ್ಥಳಗಳ ಲಿಸ್ಟ್ ಅನ್ನು ಹಾಕಲಾಗಿತ್ತು. ಇದನ್ನು ನೋಡಿದ ಬೆಂಗಳೂರು ಜನ ಫುಲ್ ಖುಷಿ ಆಗಿದ್ದರು. ಆದರೆ ಅವರ ಖುಷಿಗೆ ಇದೀಗ ತಣ್ಣೀರೆರೆಚಿದಂತಾಗಿದೆ.

ಹೌದು, ಈ ಟ್ವಿಟ್‌ನ ಅಸಲಿ ಕಹಾನಿಯೇ ಬೇರೆ ಇದೆ. ಪೊಲೀಸ್ ಇಲಾಖೆ ಲೆಕ್ಕವೊಂದನ್ನು ನೀಡಿದೆ. ಈ ಲೆಕ್ಕವನ್ನು ಕ್ಲಿಯರ್ ಮಾಡಿದರೆ ಮಾತ್ರ ನೀವು ಪೊಲೀಸ್ ಇಲಾಖೆ ಹೇಳಿದ ಸ್ಥಳಗಳಿಗೆ ಹೋಗಲು ಸಾಧ್ಯವಾಗುತ್ತದೆ. ಪೊಲೀಸರು 1 ರಿಂದ 10 ನಂಬರ್ ನೀಡಿ ಲೆಕ್ಕ ಮಾಡಲು ಹೇಳಿದ್ದಾರೆ.

ಇದನ್ನು ಗುಣಿಸಿ ಲೆಕ್ಕ ಮಾಡಿದರೆ ಲೆಕ್ಕಕ್ಕೂ ಹಾಗೂ ಪಿಕ್ನಿಕ್ ಸ್ಥಳಗಳ ನಂಬರ್‌ಗೂ ಲೆಕ್ಕದ ಉತ್ತರಕ್ಕೂ ಮ್ಯಾಚ್ ಆಗೋದೆ ಇಲ್ಲ. ಆದರೆ ಪೊಲೀಸರು ತಿಳಿಸಿದಂತಹ ಸ್ಥಳಗಳ ಹೆಸರಲ್ಲಿ ಮನೆ ಕೂಡ ಇದೆ. ಲೆಕ್ಕ ಮಾಡಿ ಕೊನೆಯಲ್ಲಿ ಉತ್ತರ ಬಂದರೆ ಮನೆಯ ಆಪ್ಷನ್ ಆಗಿರುತ್ತದೆ. ಇಂತಹ ಬುದ್ದಿವಂತಿಕೆಯ ಲೆಕ್ಕವನ್ನು ಸಾರ್ವಜನಿಕರಿಗೆ ನೀಡಿದ್ದಾರೆ ಬುದ್ದಿವಂತ ಬೆಂಗಳೂರು ಪೊಲೀಸರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...