alex Certify BSY ಬಲ ಹೆಚ್ಚಿಸಿದ ಬೈಎಲೆಕ್ಷನ್ ಗೆಲುವು, ಬಿ.ವೈ. ವಿಜಯೇಂದ್ರಗೆ ಭಾರೀ ಡಿಮ್ಯಾಂಡ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSY ಬಲ ಹೆಚ್ಚಿಸಿದ ಬೈಎಲೆಕ್ಷನ್ ಗೆಲುವು, ಬಿ.ವೈ. ವಿಜಯೇಂದ್ರಗೆ ಭಾರೀ ಡಿಮ್ಯಾಂಡ್…!

ರಾಜ್ಯದ ಗಮನ ಸೆಳೆದಿದ್ದ ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಸಮೀಕ್ಷೆಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ಹೇಳಲಾಗಿತ್ತು.

ಹಲವು ಕಾರಣಗಳಿಂದ ಈ ಉಪ ಚುನಾವಣೆ ಮಹತ್ವದ್ದಾಗಿತ್ತು. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ನಡೆದ ಮಹತ್ವದ ಚುನಾವಣೆ ಇದಾಗಿತ್ತು. ಇನ್ನು ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಇಂತಹ ಹೊತ್ತಲ್ಲೇ ನಡೆದ ಉಪ ಚುನಾವಣೆ ಸಿಎಂ ಯಡಿಯೂರಪ್ಪ ಅವರಿಗೆ ಪ್ರಮುಖವಾಗಿದೆ. ಬೈ ಎಲೆಕ್ಷನ್ ಫಲಿತಾಂಶ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದವರ ಬಾಯಿ ಮುಚ್ಚಿಸಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಮತ್ತು ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದರು. ಇವೆರಡೂ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

ಡಿಕೆ ಬ್ರದರ್ಸ್ ರಣತಂತ್ರದ ನಡುವೆಯೂ ಆರ್.ಆರ್. ನಗರದಲ್ಲಿ ಬಿಜೆಪಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಇದಕ್ಕೆ ಕಾರಣ ಬಿಜೆಪಿ ನಾಯಕರ ಕಾರ್ಯತಂತ್ರ. ಇನ್ನು ಶಿರಾದಲ್ಲಿ ಮೂರನೇ ಸ್ಥಾನ ಪಡೆಯುತ್ತಿದ್ದ ಬಿಜೆಪಿ ಗೆಲುವು ಸಾಧಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಚುನಾವಣೆ ಆರಂಭವಾದ ಸಂದರ್ಭದಲ್ಲಿ ಬಿಜೆಪಿ ಗೆಲ್ಲುವ ಲಕ್ಷಣಗಳು ಇರಲಿಲ್ಲ. ಆದರೆ ನಂತರದ ಕೆಲವೇ ದಿನಗಳಲ್ಲಿ ಆದ ಬದಲಾವಣೆಯನ್ನು ಮತದಾರರೇ ಬಲ್ಲರು.

ಹಿಂದಿನ ಚುನಾವಣೆಗಳಲ್ಲಿ ಗೆಲುವನ್ನೇ ಕಾಣದ ಬಿಜೆಪಿ ಶಿರಾದಲ್ಲಿ ಗೆಲುವು ಕಂಡಿರುವುದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಪಾತ್ರ ಪ್ರಮುಖವಾಗಿದೆ. ಆಡಳಿತರೂಢ ಬಿಜೆಪಿ ಶಿರಾದಲ್ಲಿ ಜೆಡಿಎಸ್ ಬಳಿ ಇದ್ದ ಕ್ಷೇತ್ರವನ್ನು ವಶಕ್ಕೆ ಪಡೆದಿದೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದ ಶಿರಾದದಲ್ಲಿ ಮೊದಲ ಬಾರಿಗೆ ಬಿಜೆಪಿಯ ಕಮಲ ಅರಳಿದೆ.

ಸಂಘಟಿತ ಪ್ರಯತ್ನದಿಂದ ಗೆಲುವು ಸಿಕ್ಕಿದೆ ಎಂದು ಹೇಳಲಾಗಿದ್ದರೂ, ಬಿ.ವೈ. ವಿಜಯೇಂದ್ರ ಪಾತ್ರ ಕೂಡ ಪ್ರಮುಖವಾಗಿದೆ. ಈ ಫಲಿತಾಂಶದಿಂದ ಸರ್ಕಾರದ ಸ್ಥಿರತೆಗೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಬಿಜೆಪಿ ಗೆಲ್ಲುವುದೇ ಕಠಿಣವಾಗಿದ್ದ ಕೆ.ಆರ್. ಪೇಟೆಯಲ್ಲಿ ಕಮಲ ಅರಳಿಸಿದ್ದ ವಿಜಯೇಂದ್ರ ಶಿರಾದಂತಹ ಕಠಿಣ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಉಪ ಚುನಾವಣೆ ನಡೆಯಲಿರುವ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ಉಸ್ತುವಾರಿ ವಹಿಸಬೇಕೆಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...