alex Certify ಬಸ್​ ತಂಗುದಾಣವನ್ನೇ ಕಣಜ ಸಂಗ್ರಹದ ಕೊಠಡಿ ಮಾಡಿಕೊಂಡ ರೈತ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್​ ತಂಗುದಾಣವನ್ನೇ ಕಣಜ ಸಂಗ್ರಹದ ಕೊಠಡಿ ಮಾಡಿಕೊಂಡ ರೈತ..!

ರಾಜ್ಯದಲ್ಲಿ ಕೊರೊನಾ ಲಾಕ್​ಡೌನ್​ ಜಾರಿಯಾಗಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಲಾಕ್​ಡೌನ್​ ಇರೋದ್ರಿಂದ ಬಸ್​ಗಳ ಸಂಚಾರಕ್ಕೂ ಬ್ರೇಕ್​ ಬಿದ್ದಿದೆ. ಬಸ್​ಗಳೇ ಬರಲ್ಲ ಅಂದಮೇಲೆ ಬಸ್​ ನಿಲ್ದಾಣದ ಕಡೆಯೂ ಜನರ ಓಡಾಟ ಇರೋದಿಲ್ಲ. ಇದೇ ಸಂದರ್ಭದ ಲಾಭವನ್ನ ಪಡೆದ ರೈತನೊಬ್ಬ ಸರ್ಕಾರಿ ಬಸ್​ ತಂಗುದಾಣವನ್ನ ತನ್ನ ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾನೆ.

ಹಾವೇರಿ ತಾಲೂಕಿನ ಮಣ್ಣೂರು ಗ್ರಾಮದಲ್ಲಿರುವ ಬಸ್​ ತಂಗುದಾಣ ಇದೀಗ ರೈತನೊಬ್ಬನ ಒಕ್ಕಲು ಕಣವಾಗಿ ಬದಲಾಗಿದೆ. ತನ್ನ ಜಮೀನಿನಲ್ಲಿ ಬೆಳೆದ ಶೇಂಗಾ ಹೊಟ್ಟನ್ನ ರೈತ ಈ ತಂಗುದಾಣದಲ್ಲಿ ಸಂಗ್ರಹಿಸಿ ಇಟ್ಟಿದ್ದಾನೆ. ಲಾಕ್​ಡೌನ್​ ಸಮಯದಲ್ಲಿ ಜನರು ಬರಲ್ಲ ಅಂತಾ ರೈತ ಮಾಡಿದ ಈ ಪ್ಲಾನ್​ ಕಂಡು ಸಾರ್ವಜನಿಕರು ಶಾಕ್​ ಆಗಿದ್ದಾರೆ.

ಆಕಳ ಸಗಣಿಯಿಂದ ದೂರವಾಗುತ್ತಾ ಕೊರೊನಾ ಸೋಂಕು….?

ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ರೌದ್ರ ನರ್ತನ ತಹಬದಿಗೆ ಬಾರದ ಹಿನ್ನೆಲೆ ರಾಜ್ಯ ಸರ್ಕಾರ ಮೇ 10ನೇ ತಾರೀಖಿನಿಂದ ಮೇ 24ರವರೆಗೂ ರಾಜ್ಯಾದ್ಯಂತ ಲಾಕ್​ಡೌನ್  ಆದೇಶವನ್ನ ಜಾರಿಗೆ ತಂದಿದೆ. ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...