ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ ಜಾರಿಯಾಗಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಲಾಕ್ಡೌನ್ ಇರೋದ್ರಿಂದ ಬಸ್ಗಳ ಸಂಚಾರಕ್ಕೂ ಬ್ರೇಕ್ ಬಿದ್ದಿದೆ. ಬಸ್ಗಳೇ ಬರಲ್ಲ ಅಂದಮೇಲೆ ಬಸ್ ನಿಲ್ದಾಣದ ಕಡೆಯೂ ಜನರ ಓಡಾಟ ಇರೋದಿಲ್ಲ. ಇದೇ ಸಂದರ್ಭದ ಲಾಭವನ್ನ ಪಡೆದ ರೈತನೊಬ್ಬ ಸರ್ಕಾರಿ ಬಸ್ ತಂಗುದಾಣವನ್ನ ತನ್ನ ಕೃಷಿ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾನೆ.
ಹಾವೇರಿ ತಾಲೂಕಿನ ಮಣ್ಣೂರು ಗ್ರಾಮದಲ್ಲಿರುವ ಬಸ್ ತಂಗುದಾಣ ಇದೀಗ ರೈತನೊಬ್ಬನ ಒಕ್ಕಲು ಕಣವಾಗಿ ಬದಲಾಗಿದೆ. ತನ್ನ ಜಮೀನಿನಲ್ಲಿ ಬೆಳೆದ ಶೇಂಗಾ ಹೊಟ್ಟನ್ನ ರೈತ ಈ ತಂಗುದಾಣದಲ್ಲಿ ಸಂಗ್ರಹಿಸಿ ಇಟ್ಟಿದ್ದಾನೆ. ಲಾಕ್ಡೌನ್ ಸಮಯದಲ್ಲಿ ಜನರು ಬರಲ್ಲ ಅಂತಾ ರೈತ ಮಾಡಿದ ಈ ಪ್ಲಾನ್ ಕಂಡು ಸಾರ್ವಜನಿಕರು ಶಾಕ್ ಆಗಿದ್ದಾರೆ.
ಆಕಳ ಸಗಣಿಯಿಂದ ದೂರವಾಗುತ್ತಾ ಕೊರೊನಾ ಸೋಂಕು….?
ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ರೌದ್ರ ನರ್ತನ ತಹಬದಿಗೆ ಬಾರದ ಹಿನ್ನೆಲೆ ರಾಜ್ಯ ಸರ್ಕಾರ ಮೇ 10ನೇ ತಾರೀಖಿನಿಂದ ಮೇ 24ರವರೆಗೂ ರಾಜ್ಯಾದ್ಯಂತ ಲಾಕ್ಡೌನ್ ಆದೇಶವನ್ನ ಜಾರಿಗೆ ತಂದಿದೆ. ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ.