alex Certify ಅಬ್ಬಾ….! ಆಟವಾಡುತ್ತಲೇ ವಿಶ್ವ ದಾಖಲೆ ನಿರ್ಮಿಸಿದ ಬಾಲಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಬ್ಬಾ….! ಆಟವಾಡುತ್ತಲೇ ವಿಶ್ವ ದಾಖಲೆ ನಿರ್ಮಿಸಿದ ಬಾಲಕ….!

ಮೆದುಳಿಗೆ ಕೆಲಸ ಕೊಡುವ ರೂಬಿಕ್​ ಕ್ಯೂಬ್ ಪಜಲ್​ ಆಟ ಎಲ್ಲರ ತಲೆಗೂ ಅಷ್ಟು ಸುಲಭವಾಗಿ ಹೋಗೋದಿಲ್ಲ. ಒಂದೇ ಒಂದು ರೂಬಿಕ್​ ಕ್ಯೂಬ್ ಸರಿ ಮಾಡಬೇಕು ಅಂದ್ರೂನು ಬುದ್ಧಿ ಶಕ್ತಿಯನ್ನ ತುಸು ಹೆಚ್ಚೇ ಬಳಸಬೇಕು.‌

ಕಳೆದ ವರ್ಷ ಚೆನ್ನೈನ 25 ವರ್ಷದ ಯುವಕ ನೀರಿನಾಳದಲ್ಲಿ ಉಸಿರು ಬಿಗಿಹಿಡಿದು ರುಬಿಕ್​ ಕ್ಯೂಬ್ ಪಜಲ್​ ಆಟ ಆಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು.‌

ಇಳಯರಾಂ ಶೇಖರ್​​​ ನೀರಿನಾಳದಲ್ಲಿ ಕೇವಲ 2 ನಿಮಿಷ ಕಾಲಾವಕಾಶದಲ್ಲಿ ಈ ಸಾಧನೆಯನ್ನ ಮಾಡಿದ್ದರು. ಇದೀಗ ದಕ್ಷಿಣ ಭಾರತದ ಮತ್ತೊಬ್ಬ ಬಾಲಕ ಒಂದೇ ಬಾರಿಗೆ ಮೂರು ರೂಬಿಕ್​ ಕ್ಯೂಬ್ ಪಜಲ್​​ಗಳನ್ನ ಆಡುವ ಮೂಲಕ ಗಿನ್ನಿಸ್​ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಬೆಂಗಳೂರಿನ 8 ವರ್ಷದ ಬಾಲಕ ಅಥರ್ವ ಆರ್​. ಭಟ್​​ ಎಂಬಾತ ಎರಡು ಕೈ ಹಾಗೂ ಕಾಲುಗಳ ಸಹಾಯದಿಂದ ಮೂರು ರೂಬಿಕ್​ಗಳನ್ನ ಆಡಿದ್ದಾನೆ. ಈ ಸಾಧನೆ ಮಾಡಲು ಕೇವಲ 2 ನಿಮಿಷ ಕಾಲಾವಕಾಶ ತೆಗೆದುಕೊಂಡಿದ್ದಾನೆ.‌

ಅಥರ್ವನ ಸಾಧನೆಯ ವಿಡಿಯೋವನ್ನ ಗಿನ್ನಿಸ್​ ವಿಶ್ವ ದಾಖಲೆಯ ಅಧಿಕೃತ ಯುಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದ್ದು ಸಖತ್ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...