ಮೆದುಳಿಗೆ ಕೆಲಸ ಕೊಡುವ ರೂಬಿಕ್ ಕ್ಯೂಬ್ ಪಜಲ್ ಆಟ ಎಲ್ಲರ ತಲೆಗೂ ಅಷ್ಟು ಸುಲಭವಾಗಿ ಹೋಗೋದಿಲ್ಲ. ಒಂದೇ ಒಂದು ರೂಬಿಕ್ ಕ್ಯೂಬ್ ಸರಿ ಮಾಡಬೇಕು ಅಂದ್ರೂನು ಬುದ್ಧಿ ಶಕ್ತಿಯನ್ನ ತುಸು ಹೆಚ್ಚೇ ಬಳಸಬೇಕು.
ಕಳೆದ ವರ್ಷ ಚೆನ್ನೈನ 25 ವರ್ಷದ ಯುವಕ ನೀರಿನಾಳದಲ್ಲಿ ಉಸಿರು ಬಿಗಿಹಿಡಿದು ರುಬಿಕ್ ಕ್ಯೂಬ್ ಪಜಲ್ ಆಟ ಆಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು.
ಇಳಯರಾಂ ಶೇಖರ್ ನೀರಿನಾಳದಲ್ಲಿ ಕೇವಲ 2 ನಿಮಿಷ ಕಾಲಾವಕಾಶದಲ್ಲಿ ಈ ಸಾಧನೆಯನ್ನ ಮಾಡಿದ್ದರು. ಇದೀಗ ದಕ್ಷಿಣ ಭಾರತದ ಮತ್ತೊಬ್ಬ ಬಾಲಕ ಒಂದೇ ಬಾರಿಗೆ ಮೂರು ರೂಬಿಕ್ ಕ್ಯೂಬ್ ಪಜಲ್ಗಳನ್ನ ಆಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಬೆಂಗಳೂರಿನ 8 ವರ್ಷದ ಬಾಲಕ ಅಥರ್ವ ಆರ್. ಭಟ್ ಎಂಬಾತ ಎರಡು ಕೈ ಹಾಗೂ ಕಾಲುಗಳ ಸಹಾಯದಿಂದ ಮೂರು ರೂಬಿಕ್ಗಳನ್ನ ಆಡಿದ್ದಾನೆ. ಈ ಸಾಧನೆ ಮಾಡಲು ಕೇವಲ 2 ನಿಮಿಷ ಕಾಲಾವಕಾಶ ತೆಗೆದುಕೊಂಡಿದ್ದಾನೆ.
ಅಥರ್ವನ ಸಾಧನೆಯ ವಿಡಿಯೋವನ್ನ ಗಿನ್ನಿಸ್ ವಿಶ್ವ ದಾಖಲೆಯ ಅಧಿಕೃತ ಯುಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದ್ದು ಸಖತ್ ವೈರಲ್ ಆಗಿದೆ.