ಕಲಬುರಗಿ: 4 ಲಕ್ಷ ರೂಪಾಯಿಗೂ ಹೆಚ್ಚು ಖೋಟಾ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಲಬುರಗಿಯ ಡಿಸಿಐಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತನನ್ನು ಸೇಡಂ ಪಟ್ಟಣದ ಆಶ್ರಯ ಕಾಲೋನಿ ನಿವಾಸಿ ಅಲ್ಲಾವುದ್ದೀನ್ ಎಂದು ಗುರುತಿಸಲಾಗಿದೆ. ಬ್ಯಾಗ್ ನಲ್ಲಿ ಕಂತೆಗಟ್ಟಲೇ ಖೋಟಾ ನೋಟುಗಳನ್ನಿಟ್ಟುಕೊಂಡು ಚಿಂಚೋಳಿ ಮಾರ್ಗವಾಗಿ ಬೈಕ್ ನಲ್ಲಿ ಆರೋಪಿ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಪರಿಶೀಲಿಸಿದ್ದಾರೆ.
ಬಂಧಿತನ ಬಳಿಯಿದ್ದ 500, 200 ಹಾಗೂ 100 ರೂ. ಮುಖಬೆಲೆಯ 4.22 ಲಕ್ಷ ರೂಪಾಯಿ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ.