alex Certify 2020 ರ ‘ವಿಶ್ವ ಸುಂದರಿ’ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಕನ್ನಡತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020 ರ ‘ವಿಶ್ವ ಸುಂದರಿ’ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಕನ್ನಡತಿ..!

 

 

ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವಿಶ್ವ ಸುಂದರಿ 2020ರ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸಿದ್ದ ಉಡುಪಿ ಮೂಲದ ಆ್ಯಡ್ಲಿನ್​ ಕ್ಯಾಸ್ಟೆಲಿನೋ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಆ್ಯಡ್ಲಿನೋ 2020ನೇ ಸಾಲಿನ ಲೀವಾ ಮಿಸ್​​ ಡೀವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ವಿಶ್ವ ಸುಂದರಿ ಸ್ಫರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸುವ ಅವಕಾಶವನ್ನ ಪಡೆದುಕೊಂಡಿದ್ದರು.

ವಿಶ್ವ ಸುಂದರಿ ಸ್ಪರ್ಧೆಯಲ್ಲಿಯೂ ಆ್ಯಡ್ಲಿನ್ ಪ್ರಬಲ ಪೈಪೋಟಿ ನೀಡುವ ಮೂಲಕ ಕನ್ನಡಿಗರ ಹೆಮ್ಮೆಗೆ ಕಾರಣರಾಗಿದ್ದಾರೆ. 2020ರ ವಿಶ್ವ ಸುಂದರಿ ಕಿರೀಟ ಮೆಕ್ಸಿಕೋದ ಆ್ಯಂಡ್ರಿಯೋ ಮೆಝು ಅವರ ಮುಡಿಗೇರಿದೆ.

ಆ್ಯಡ್ಲಿನ್ ಉಡುಪಿಯ ಉದ್ಯಾವರ ಮೂಲದವರಾಗಿದ್ದು ಕ್ಯಾಥೋಲಿಕ್​ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆ್ಯಡ್ಲಿನ್ ಮಾತೃಭಾಷೆ ಕೊಂಕಣಿಯಾಗಿದ್ದರೂ ಸಹ ಕನ್ನಡ ಭಾಷೆಯನ್ನೂ ಅರಿತಿದ್ದಾರೆ. ಕುವೈತ್​ ಹಾಗೂ ಮುಂಬೈನಲ್ಲಿ ಆ್ಯಡ್ಲಿನ್ ಶಿಕ್ಷಣವನ್ನ ಪೂರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...