alex Certify 20 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ‘ಚಿನ್ನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ‘ಚಿನ್ನ’

ಮಹಿಳೆಯೊಬ್ಬರು ತಾವು ಕಳೆದುಕೊಂಡಿದ್ದ ಚಿನ್ನವನ್ನು 20 ವರ್ಷಗಳ ಬಳಿಕ ಅಚ್ಚರಿಯ ರೀತಿಯಲ್ಲಿ ಮರಳಿ ಪಡೆದುಕೊಂಡಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಬಸರಿಯಾ ಎಂಬ ಈ ಮಹಿಳೆ 20 ವರ್ಷಗಳ ಹಿಂದೆ ವಿವಾಹ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ವೇಳೆ ತಮ್ಮ ಸೊಂಟದ ಪಟ್ಟಿಯ 12 ಗ್ರಾಂ ತೂಕದ ಒಂದು ಭಾಗವನ್ನು ಕಳೆದುಕೊಂಡಿದ್ದರು.

ಬಸರಿಯಾ ತಾವು ಕಳೆದುಕೊಂಡಿದ್ದ ಚಿನ್ನದ ಆಸೆಯನ್ನೇ ಬಿಟ್ಟಿದ್ದು, ಆದರೆ ಮಂಗಳವಾರದಂದು ಅವರ ಮನೆಗೆ ಬಂದ ಯುವಕನೊಬ್ಬ ಆಹಾರ ಪದಾರ್ಥಗಳಿದ್ದ ದೊಡ್ಡ ಪ್ಯಾಕ್ ನೀಡಿದ್ದಾನೆ.

ತಾನು ಡೆಲಿವರಿ ಬಾಯ್ ಎಂದು ಹೇಳಿದ ಯುವಕ ಅದನ್ನು ನೀಡಿ ತೆರಳಿದ್ದು, ಮಹಿಳೆ ತೆರೆದು ನೋಡಿದಾಗ ಅವರಿಗೆ ಅಚ್ಚರಿ ಕಾದಿದೆ. ಪ್ಯಾಕ್ ನಲ್ಲಿ ಆಹಾರ ಪದಾರ್ಥದ ಜೊತೆಗೆ ಎರಡು ಚಿನ್ನದ ನಾಣ್ಯ ಕಂಡುಬಂದಿದ್ದು ಇದರೊಂದಿಗೆ ಪತ್ರವೊಂದನ್ನು ಇಡಲಾಗಿತ್ತು.

ಈ ಪತ್ರದಲ್ಲಿ ತನ್ನನ್ನು ಕ್ಷಮಿಸುವಂತೆ ಮನವಿ ಮಾಡಿದ್ದ ವ್ಯಕ್ತಿ, ನೀವು 20 ವರ್ಷಗಳ ಹಿಂದೆ ಕಳೆದುಕೊಂಡ ಚಿನ್ನ ನನಗೆ ಸಿಕ್ಕಿದ್ದು, ಆದರೆ ಅದನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಅದರ ಬದಲಿಗೆ ಈಗ ಚಿನ್ನದ ನಾಣ್ಯ ಮರಳಿಸುತ್ತಿದ್ದೇನೆ ಎಂದು ಬರೆಯಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...