alex Certify ಕಪ್ಪು ಚಿರತೆ​ ಫೋಟೋಗಾಗಿ ಬರೋಬ್ಬರಿ 9000 ನಿಮಿಷಗಳ ಕಾಲ ಕಾದ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪು ಚಿರತೆ​ ಫೋಟೋಗಾಗಿ ಬರೋಬ್ಬರಿ 9000 ನಿಮಿಷಗಳ ಕಾಲ ಕಾದ ಯುವಕ..!

ಕರ್ನಾಟಕ ರಾಷ್ಟ್ರೀಯ ಅರಣ್ಯವೊಂದರಲ್ಲಿದ್ದ ಒಂದೇ ರಸ್ತೆಯಲ್ಲಿ ಬರೋಬ್ಬರಿ 7 ದಿನಗಳ ಕಾಲ ಕಾದ ಯುವಕ ಕೊನೆಗೂ ಬ್ಲಾಕ್​ ಪ್ಯಾಂಥರ್​​​ ಫೋಟೋ ಕ್ಲಿಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯಪುರದ 18 ವರ್ಷದ ಧ್ರುವ್​ ಪಾಟೀಲ್​ ವನ್ಯಜೀವಿಗಳ ಬಗ್ಗೆ ವಿಶೇಷ ಒಲವನ್ನ ಹೊಂದಿದ್ದಾರೆ. ತಮ್ಮ ಕ್ಯಾಮರಾ ಕಣ್ಣಲ್ಲಿ ಬ್ಲಾಕ್​ ಪ್ಯಾಂಥರ್​​ ಸೆರೆ ಹಿಡಿಯಲು ಇಚ್ಚಿಸಿದ್ದ ಧ್ರುವ್​​ ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ವಾರಗಟ್ಟಲೇ ಕಾಲ ಕಳೆದಿದ್ದಾರೆ.

ಧ್ರುವ್​ ತಮ್ಮ ಕ್ಯಾಮರಾಗಳೊಂದಿಗೆ ಭೇಟಿ ನೀಡಿದ್ದು ಕೈಮರ ಎಂಬ ಒಂದೇ ರಸ್ತೆಯಲ್ಲಿ ಬರೋಬ್ಬರಿ 9 ಸಾವಿರ ನಿಮಿಷಗಳನ್ನ ಕಳೆದಿದ್ದಾರೆ. ಅಂತಿಮವಾಗಿ ಬ್ಲಾಕ್​ ಪ್ಯಾಂಥರ್​ ಫೋಟೋ ಕ್ಲಿಕ್ಕಿಸಿದ್ದಾರೆ. ಧ್ರುವ್​​ ಕ್ಯಾಮರಾ ಕಣ್ಣಲ್ಲಿ ಪ್ರಾಣಿಗಳನ್ನ ಸೆರೆ ಹಿಡಿಯೋದು ಮಾತ್ರವಲ್ಲದೇ ಮೈಸೂರು ಮೃಗಾಲಯದಲ್ಲಿ ಅನೇಕ ಪ್ರಾಣಿಗಳನ್ನ ದತ್ತು ಪಡೆದಿದ್ದಾರೆ. ಅಲ್ಲದೇ ಅನೇಕ ಪಕ್ಷಿಗಳನ್ನ ನೋಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಧ್ರುವ್​ ಕಾಂಗ್ರೆಸ್​ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್​ರ ಕಿರಿಯ ಪುತ್ರರಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...