ಹುಟ್ಟಿನಿಂದಲೇ ಸ್ನಾಯು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫಾತಿಮಾ ಎಂಬ 14 ತಿಂಗಳ ಹಸುಗೂಸು ಬರೋಬ್ಬರಿ 16 ಕೋಟಿ ರೂಪಾಯಿ ಮೌಲ್ಯದ ಜೀನ್ ಥೆರಪಿಗೆ ಒಳಗಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮೊಹಮ್ಮದ್ ಬಾಸಿಲ್ ಹಾಗೂ ಖಾದಿಜಾ ದಂಪತಿಯ ಪುತ್ರಿ ಫಾತಿಮಾ ಈ ದುಬಾರಿ ಚಿಕಿತ್ಸೆಗೆ ಒಳಗಾಗಿದ್ದಾಳೆ.
ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಫಾತಿಮಾ ಜೀನ್ ಥೆರಪಿಗೆ ಒಳಗಾಗಿದ್ದಾಳೆ. ನೋವಾರ್ಟೀಸ್ ಎಂಬ ಹೆಸರಿನ ಬಹುರಾಷ್ಟ್ರೀಯ ಔಷಧಿ ಕಂಪನಿ ನೀಡಿದ ಲಾಟರಿಯಲ್ಲಿ ಫಾತಿಮಾ ಆಯ್ಕೆಯಾಗಿದ್ದಳು, ಈ ಹಣದಿಂದ ಫಾತಿಮಾಗೆ ಈ ವಿಶೇಷ ಜೀನ್ ಚಿಕಿತ್ಸೆ ನಡೆಸಲಾಗಿದೆ.
ಈ ಮೆಡಿಸಿನ್ಗಳಿಗೆ 2.1 ಮಿಲಿಯನ್ ಡಾಲರ್ ಅಂದರೆ ಸರಿ ಸುಮಾರು 16 ಕೋಟಿ ಖರ್ಚು ಆಗಿದೆ ಎಂದು ಆಸ್ಪತ್ರೆಯ ಸಿಇಓ ನವೀತ್ ಥೋಮಸ್ ಹೇಳಿದ್ದಾರೆ.
ಈ ಚಿಕಿತ್ಸೆಗೆ ಫಾತಿಮಾ ಉತ್ತಮವಾಗಿ ಸ್ಪಂದಿಸಿದ್ದಾಳೆ. ಚಿಕಿತ್ಸೆ ಬಳಿಕ ಫಾತಿಮಾ ಕಾಲಿಗೆ ಸ್ವಾಧೀನ ಬಂದಿದೆ. ಆಕೆ ಸಾಮಾನ್ಯ ಮಕ್ಕಳಂತೆ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಫಾತಿಮಾ ತಂದೆ ಹೇಳಿದ್ದಾರೆ.
ಫಾತಿಮಾಗೆ ಮೆದುಳಿನ ಸ್ನಾಯುಗೆ ವಿದ್ಯುತ್ ಸಂಕೇತಗಳನ್ನ ರವಾನಿಸುವ ನರಕೋಶಗಳ ನಷ್ಟದಿಂದ ಸ್ಪೈನಲ್ ಮಸ್ಕುಲಾರ್ ಅಟ್ರೋಫಿ ಅಥವಾ ಎಸ್ಎಂಎ ಎಂಬ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.