ನಿಜಕ್ಕೂ ಈ ಚಾಲಕ ಭಾರಿ ಅದೃಷ್ಟವಂತನೆಂದೇ ಹೇಳಬೇಕು. ಈತ ಚಲಾಯಿಸುತ್ತಿದ್ದ ಲಾರಿ 100 ಅಡಿ ಆಳದ ನಾಲೆಗೆ ಬಿದ್ದರೂ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾನೆ.
ಇಂತಹುದೊಂದು ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದ್ದು, ಕೆಆರ್ ನಗರದ ಮಹಮ್ಮದ್ ವಾಸಿಂ ಬದುಕುಳಿದ ಚಾಲಕನಾಗಿದ್ದಾನೆ.
ಕಾರ್ಯನಿಮಿತ್ತ ಪಿರಿಯಾಪಟ್ಟಣಕ್ಕೆ ತೆರಳಿದ್ದ ಮಹಮ್ಮದ್ ವಾಸಿಂ ವಾಪಸ್ ಕೆಆರ್ ನಗರಕ್ಕೆ ಹೊರಟಿದ್ದ. ಈ ವೇಳೆ ಯಶೋಧರಪುರ ಬಳಿ ಎದುರಿನಿಂದ ಮತ್ತೊಂದು ವಾಹನ ಬಂದ ಕಾರಣ ಅದರ ಪ್ರಖರ ಬೆಳಕಿಗೆ ಗಲಿಬಿಲಿಗೊಂಡು ನಿಯಂತ್ರಣ ತಪ್ಪಿ ಲಾರಿ ಹಾರಂಗಿ ನಾಲೆಗೆ ಬಿದ್ದಿದೆ. ಇದರಿಂದಾಗಿ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದರೂ ಚಾಲಕ ಮಹಮ್ಮದ್ ವಾಸಿಂ ಪವಾಡ ಸದೃಶ್ಯವಾಗಿ ಪಾರಾಗಿದ್ದಾನೆ.