ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದೆ. ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದರೆ ಸೋಂಕಿನಿಂದ ಜನರು ಸಾಯುತ್ತಿದ್ದಾರೆ ಎನ್ನುವುದಕ್ಕಿಂತಲೂ ಭಯದಿಂದಲೇ ಹೆಚ್ಚು ಜನರು ಸಾವನ್ನಪ್ಪುತ್ತಿರುವಷ್ಟರ ಮಟ್ಟಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಪ್ರಾಣವಾಯುಗಾಗಿ ಜನರು ಪರದಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಜನರು ಏನು ಮಾಡಬೇಕು? ಕೊರೊನಾ ಸೋಂಕಿತರು ಯಾವೆಲ್ಲ ರೀತಿ ಮುಂಜಾಗೃತೆಯನ್ನು ವಹಿಸಬೇಕು? ಮನೆಯಲ್ಲಿಯೇ ಇದ್ದು ಹೇಗೆ ಸೋಂಕಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಡಾ.ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಾ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಡಾ.ರಾಜು ಕೊರೊನಾತಂಕದಿಂದ ದೂರವಾಗುವ ಬಗೆ, ಕೋವಿಡ್ ಲಕ್ಷಣಗಳು ಹಾಗೂ ಪರಿಹಾರದ ಬಗ್ಗೆ ವಿವರಿಸಿದ್ದಾರೆ. ಕೊರೊನಾ ಕುರಿತು ಪ್ರತಿಯೊಬ್ಬರೂ ತಮ್ಮಲ್ಲಿರುವ ಭಯವನ್ನು ಮೊದಲು ಹೋಗಲಾಡಿಸಿ. ಆಕ್ಸಿಜನ್ ಕೊರತೆ ಸಮಸ್ಯೆಗೆ ಮೊದಲ ಪರಿಹಾರವೇ ಇದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ಉಲ್ಬಣ ಹಿನ್ನಲೆಯಲ್ಲಿ ಮೋದಿ ಮಹತ್ವದ ನಿರ್ಧಾರ: ಬಂಗಾಳ ರ್ಯಾಲಿ ರದ್ದು, ಉನ್ನತ ಸಭೆ
ಸೂಕ್ತವಾದ ಗಾಳಿ, ಬೆಳಕು ಇರುವ ಕಡೆ ಇರುವುದರ ಜೊತೆ 10 ನಿಮಿಷವಾದರೂ ಸೂರ್ಯನ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಉಸಿರಾಟದ ತೊಂದರೆ ಇಲ್ಲದವರು ಪ್ರಾಣಾಯಾಮ ಮಾಡುವುದು ಉತ್ತಮ. ಉಗುರು ಬೆಚ್ಚಗಿನ ನೀರು ಸೇವಿಸುವುದು, ಆಹಾರದಲ್ಲಿ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಉಪಯೋಗಿಸುವುದು, ಮನೆಯಲ್ಲಿಯೇ ಇದ್ದು ಸಂಪೂರ್ಣ ವಿಶ್ರಾಂತಿ ಪಡೆಯುವುದರೊಂದಿಗೆ ಔಷಧಗಳ ಸೇವನೆ ಸೇರಿದಂತೆ ಇನ್ನಷ್ಟು ಪ್ರಮುಖ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಕೊರೊನಾದಿಂದ ಗುಣಮುಖರಾಗುವ ಸುಲಭವಿಧಾನವಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಕೊರೊನಾ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ನೀವು ಕೂಡ ಡಾ.ರಾಜು ಕೃಷ್ಣಮೂರ್ತಿಯವರ ಸಲಹೆ ಕುರಿತ ಈ ವಿಡಿಯೋವನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.