ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೋಡ್ಲು – ಕಳಸವಳ್ಳಿ ಹಿನ್ನೀರು ಪ್ರದೇಶದಲ್ಲಿ ಸ್ಥಳೀಯರ ಅನುಕೂಲಕ್ಕಾಗಿ ಲಾಂಚ್ ಸೇವೆಯನ್ನು ನೀಡಲಾಗಿದೆ. ಈ ಪ್ರದೇಶಕ್ಕೆ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು, ಲಾಂಚ್ ಸೇವೆ ಕುರಿತಂತೆ ಘರ್ಷಣೆ ನಡೆಯುವುದು ಸಾಮಾನ್ಯವಾಗಿದೆ.
ಲಾಂಚ್ ಸೇವೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ನಿಯಮವಿದ್ದು, ಆದರೆ ಹೊರಗಿನಿಂದ ಆಗಮಿಸುವ ಪ್ರವಾಸಿಗರು ತಾವು ಮುಂಚಿತವಾಗಿ ಆಗಮಿಸಿದರೂ ತಮ್ಮ ವಾಹನಗಳನ್ನು ಲಾಂಚ್ ಗೆ ಹಾಕುವುದಿಲ್ಲ ಎಂಬ ಕಾರಣಕ್ಕೆ ತಗಾದೆ ತೆಗೆಯುತ್ತಾರೆ.
‘ಗೀಗಿ’ ಪದಗಳ ಮಹಾರಾಣಿ ಜಕ್ಕವ್ವ ಶಿರಬೂರ ಇನ್ನಿಲ್ಲ
ಇದೇ ರೀತಿ ಮಂಗಳವಾರದಂದು ಗೇಟ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಗಿಳಿದ ಬೆಂಗಳೂರು ಮೂಲದ ಪ್ರವಾಸಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಲಾಂಚ್ ಸಿಬ್ಬಂದಿ ಮನವಿ ಮಾಡಿದ್ದಾರೆ.