alex Certify ಸೋಮವಾರದಿಂದ ಓಡುತ್ತೆ ಬಿಎಂಟಿಸಿ: ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಮವಾರದಿಂದ ಓಡುತ್ತೆ ಬಿಎಂಟಿಸಿ: ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ

ಮೇ 17ರಂದು ಲಾಕ್ ಡೌನ್ ಮೂರನೇ ಹಂತ ಮುಗಿಯಲಿದೆ. ನಾಲ್ಕನೇ ಹಂತದಲ್ಲಿ ಏನೆಲ್ಲ ಇರಲಿದೆ ಎಂಬ ಪ್ರಶ್ನೆಗೆ ಪ್ರಧಾನಿ ಭಾಷಣೆ ನಂತ್ರ ಉತ್ತರ ಸಿಗಲಿದೆ.

ಆದ್ರೆ ಕರ್ನಾಟಕದಲ್ಲಿ ಸೋಮವಾರದಿಂದ ಬಿಎಂಟಿಸಿ ಸೇವೆ ಶುರುವಾಗುವ ಸಾಧ್ಯತೆ ಖಚಿತವಾಗಿದೆ. ಬಿಎಂಟಿಸಿ ಆಡಳಿತ ಮಂಡಳಿ ಈ ಬಗ್ಗೆ ಸಿಬ್ಬಂದಿಗೆ ಅಧಿಕೃತ ಆದೇಶ ನೀಡಿದೆ.

ಬಿಎಂಟಿಸಿ ರಸ್ತೆಗಿಳಿಯುವ ಮೊದಲು ಬಿಎಂಟಿಸಿ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿದೆ. ಸೋಮವಾರ ಎಲ್ಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಹಾಗಾಗಿ ಬೆಂಗಳೂರಿನ 6 ಬಿಎಂಟಿಸಿ ಡಿಪೋದಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿದೆ. ತಪಾಸಣೆ ವೇಳೆ ದೇಹದ ಉಷ್ಣತೆ, ಬಿಪಿ, ಶುಗರ್ ಸೇರಿದಂತೆ ಅವ್ರ ವಾಸದ ಬಗ್ಗೆ ಮಾಹಿತಿ ಪಡೆಯಲಾಗ್ತಿದೆ. ಒಂದು ವೇಳೆ ಕೊರೊನಾ ಲಕ್ಷಣ ಕಂಡು ಬಂದ್ರೆ ಅವ್ರನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗುತ್ತದೆ. ಆರೋಗ್ಯವಂತ ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗುತ್ತದೆ. ನಂತ್ರ ಅವ್ರು ಕೆಲಸಕ್ಕೆ ಹಾಜರಾಗಬಹುದು.

ಬಿಎಂಟಿಸಿಯಲ್ಲಿ ಕೆಲವು ನಿಯಮಗಳನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸುವುದು, ಗ್ಲೌಸ್ ಧರಿಸುವುದು ಕಡ್ಡಾಯವಾಗಿದೆ. ಹಾಗೆ 25ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಬಸ್ ಗೆ ಹಾಕುವಂತಿಲ್ಲವೆಂಬ ನಿಯಮ ಜಾರಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...