alex Certify ಸೆ. 21 ರಿಂದ ಶಾಲಾ – ಕಾಲೇಜು ಆರಂಭಕ್ಕೆ ನಡೆದಿದೆ ಸಿದ್ಧತೆ….! ಪೂರಕವಾಗಿ ಸ್ಪಂದಿಸಲಿದ್ದಾರಾ ಪೋಷಕರು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆ. 21 ರಿಂದ ಶಾಲಾ – ಕಾಲೇಜು ಆರಂಭಕ್ಕೆ ನಡೆದಿದೆ ಸಿದ್ಧತೆ….! ಪೂರಕವಾಗಿ ಸ್ಪಂದಿಸಲಿದ್ದಾರಾ ಪೋಷಕರು…?

ಕೊರೊನಾ ಕಾರಣಕ್ಕೆ ಕಳೆದ ಐದು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಇದೀಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಇವುಗಳ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಇದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಮೊದಲ ಹಂತದಲ್ಲಿ ಸೆಪ್ಟೆಂಬರ್ 21ರಿಂದ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ಶಾಲಾ – ಕಾಲೇಜುಗಳಿಗೆ ತೆರಳಿ ಶಿಕ್ಷಕರು ಹಾಗೂ ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಲು ಅನುಮತಿ ನೀಡಲಾಗಿದ್ದು, ಬಳಿಕ ಹಂತ ಹಂತವಾಗಿ ಇತರೆ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಕೊರೊನಾಗೆ ಇನ್ನೂ ಲಸಿಕೆ ಲಭ್ಯವಾಗದ ಕಾರಣ ಶಾಲಾ – ಕಾಲೇಜುಗಳ ಆರಂಭಕ್ಕೆ ಬಹಳಷ್ಟು ಪೋಷಕರಿಂದಲೇ ಅಪಸ್ವರ ಕೇಳಿಬರುತ್ತಿದ್ದು, ಹೀಗಾಗಿ ಸೆಪ್ಟೆಂಬರ್ 21ರಿಂದ ಶಾಲಾ – ಕಾಲೇಜುಗಳು ಆರಂಭವಾದರೂ ಇದಕ್ಕೆ ಎಷ್ಟರಮಟ್ಟಿಗೆ ಸ್ಪಂದನೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...