alex Certify ಸಿಸಿಬಿಯಿಂದ ಇಂದ್ರಜಿತ್ ವಿಚಾರಣೆ ಆರಂಭ; ಯಾರ ಒತ್ತಡವೂ ನನಗಿಲ್ಲ ಎಂದ ನಿರ್ದೇಶಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿಬಿಯಿಂದ ಇಂದ್ರಜಿತ್ ವಿಚಾರಣೆ ಆರಂಭ; ಯಾರ ಒತ್ತಡವೂ ನನಗಿಲ್ಲ ಎಂದ ನಿರ್ದೇಶಕ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಸಿಬಿ ಮುಂದೆ ಹಾಜರಾಗಿದ್ದು, ವಿಚಾರಣೆ ಆರಂಭವಾಗಿದೆ.

ಸಿಸಿಬಿ ಕಚೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್, ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳ ಜೊತೆ ಮೊದಲು ಮಾತನಾಡುತ್ತೇನೆ. ನನಗೆ ಯಾರಿಂದಲೂ ಯಾವುದೇ ರೀತಿ ಒತ್ತಡ ಇಲ್ಲ. ಯಾರಿಗೂ ನಾನು ಹೆದರುವುದೂ ಇಲ್ಲ. ನನಗಿರುವ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸುತ್ತೇನೆ. ವಿಚಾರಣೆ ಮುಗಿಸಿ ವಿಸ್ತಾರವಾಗಿ ಎಲ್ಲವನ್ನೂ ಮಾಧ್ಯಮಕ್ಕೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಸಿಸಿಬಿ ಅಧಿಕಾರಿಗಳು ದೆಹಲಿ ಎನ್.ಸಿ.ಬಿ. ಅಧಿಕಾರಿಗಳ ಮಾರ್ಗದರ್ಶನದಂತೆ ಇಂದ್ರಜಿತ್ ಲಂಕೇಶ್ ವಿಚಾರಣೆ ನಡೆಸುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳಿಗೆ ಕರ್ನಾಟಕ ಡ್ರಗ್ಸ್ ಪೆಡ್ಲರ್ ಆಪರೇಷನ್ ಪ್ರಮುಖ ಅಧಿಕಾರಿ ಕೆಪಿಎಸ್ ಮಲ್ಹೋತ್ರಾ ಗೈಡ್ ಮಾಡುತ್ತಿದ್ದು, ಅವರ ಸೂಚನೆ ಪ್ರಕಾರ ಇಂದ್ರಜಿತ್ ವಿಚಾರಣೆ ಆರಂಭವಾಗಿದೆ.

ಸ್ಯಾಂಡಲ್ ವುಡ್ ನ ಯಾವೆಲ್ಲ ನಟ, ನಟಿಯರು, ಸಂಗೀತ ನಿರ್ದೇಶಕರ ಹೆಸರುಗಳನ್ನು ಇಂದ್ರಜಿತ್ ಸಿಸಿಬಿ ಮುಂದೆ ಬಹಿರಂಗಪಡಿಸಲಿದ್ದಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...