alex Certify ಸಿಎಂ ಯಡಿಯೂರಪ್ಪನವರು ಪೂರ್ಣ ಪ್ರಮಾಣದಲ್ಲಿ ಸಿಎಂ ಆಗಿಯೇ ಇರುತ್ತಾರೆ ಎಂದ ನಾಗೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಯಡಿಯೂರಪ್ಪನವರು ಪೂರ್ಣ ಪ್ರಮಾಣದಲ್ಲಿ ಸಿಎಂ ಆಗಿಯೇ ಇರುತ್ತಾರೆ ಎಂದ ನಾಗೇಶ್

ಯತ್ನಾಳ್ ಸಿಡಿಸಿದ್ದ ಬಾಂಬ್ ದೊಡ್ಡ ಮಟ್ಟದಲ್ಲಿ ಸದ್ದಾಗುತ್ತಿದೆ. ಸ್ವ ಪಕ್ಷದಲ್ಲಿಯೇ ಯತ್ನಾಳ್ ಅವರ ಹೇಳಿಕೆಗೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಅನೇಕರು ಇವರ ಮಾತಿಗೆ ಕೆಂಡಾಮಂಡಲರಾಗಿದ್ದಾರೆ. ನೇರವಾಗಿ ಯತ್ನಾಳ್‌ಗೆ ಎಚ್ಚರಿಕೆಯನ್ನೂ ಬಿಜೆಪಿ ಶಾಸಕರು, ಸಚಿವರು ನೀಡುತ್ತಿದ್ದಾರೆ. ಇದರ ಮಧ್ಯೆ ಇದೀಗ ಅಬಕಾರಿ ಸಚಿವ ಎಚ್. ನಾಗೇಶ್ ಯತ್ನಾಳ್‌ಗೆ ತಿರುಗೇಟು ನೀಡಿದ್ದಾರೆ.

ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಯತ್ನಾಳ್ ಇಂತಹ ಹೇಳಿಕೆಗಳನ್ನು ನೀಡೋದನ್ನು ನಿಲ್ಲಿಸಬೇಕು. ಸಿಎಂ ಯಡಿಯೂರಪ್ಪನವರು ಪೂರ್ಣ ಪ್ರಮಾಣದಲ್ಲಿ ಸಿಎಂ ಆಗಿಯೇ ಇರುತ್ತಾರೆ. ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮ. ಸಿಎಂ ಸ್ಥಾನದಿಂದ ಬಿಎಸ್‌ವೈ ಕೆಳಗಿಳಿಸುವ ಯಾವುದೇ ಯೋಚನೆ ಹೈಕಮಾಂಡ್ ಬಳಿ ಇಲ್ಲ. ಯಡಿಯೂರಪ್ಪನವರನ್ನು ನಂಬಿಯೇ ನಾನು ಪಕ್ಷ ತೊರೆದು ಬಿಜೆಪಿ ಸೇರಿದ್ದು.

ಎಲ್ಲಾ ಕಷ್ಟ ಸಮಯದಲ್ಲೂ ಬಿಎಸ್‌ವೈ ಒಬ್ಬಂಟಿಯಾಗಿ ನಿಂತು ಪರಿಹಾರ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಸಿಎಂ ಕೆಳಗಿಳಿಸುವ ವಿಚಾರ ಯಾಕೆ ಬಂತೋ ಗೊತ್ತಿಲ್ಲ. ಆದರೆ ಈ ರೀತಿಯ ಹೇಳಿಕೆಗಳು ಸರಿಯಲ್ಲ. ಬಿಜೆಪಿ ಪಕ್ಷ ಶಿಸ್ತಿನ ಪಕ್ಷ. ಹಾಗಾಗಿ ಅಶಿಸ್ತನ್ನು ಹೈಕಮಾಂಡ್ ಸಹಿಸಲ್ಲ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...