ಬೆಂಗಳೂರು: ಕೊರೊನಾ ಹೋಗಲಾಡಿಸಲು ಓಣಿ ಓಣಿಗಳಲ್ಲಿ ಹೋಮ ಮಾಡಿಸುತ್ತಿರುವ ಬಿಜೆಪಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಗರಂ ಆಗಿರುವ ಡಿಸಿಎಂ, ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ.ಅಶ್ವತ್ಥನಾರಾಯಣ್, ಲೋಕಕಲ್ಯಾಣಕ್ಕೆ ಶಾಸಕರು ಮನೆಯಲ್ಲಿ ಹೋಮ ಮಾಡಿಕೊಳ್ಳಲಿ ಹೊರತು ಜನರಿಂದ ಮಾಡಿಸುವುದು ತಪ್ಪು ಎಂದಿದ್ದಾರೆ.
ಈ ಕಾರಣಕ್ಕೆ ವೈರಲ್ ಆಗಿದೆ ಫರ್ನಿಚರ್ ಅಂಗಡಿಯೊಂದರ ಜಾಹೀರಾತು….!
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಸಂಕಷ್ಟ ಬಂದಾಗ ದೇವರ ಮೊರೆ ಹೋಗುವುದು ತಪ್ಪಲ್ಲ. ಆದರೆ ಈಗ ಕೋವಿಡ್ ನಂತಹ ಸಂದರ್ಭದಲ್ಲಿ ಕಾನೂನು ಉಲ್ಲಂಘನೆ ಮಾಡಿ, ಜನರ ಬಳಿಯೂ ಹೋಮ ಮಾಡಿಸೋದು ತಪ್ಪು. ಶಾಸಕರ ಉದ್ದೇಶ ಸರಿಯೇ ಇರಬಹುದು ಆದರೆ ಜನರಲ್ಲಿ ಜಾಗೃತಿ ಮೂಡಿಸಬೇಕಾದವರೇ ನಿಯಮಗಳನ್ನು ಉಲ್ಲಂಘಿಸಿರುವುದು ಸರಿಯಲ್ಲ ಎಂದರು.
GOOD NEWS: ಬ್ಲಾಕ್ ಫಂಗಸ್ – ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಚಿಕಿತ್ಸೆ
ಕೊರೊನಾ ಹೆಚ್ಚುತ್ತಿದೆ. ಅಲ್ಲದೇ ಲಾಕ್ ಡೌನ್ ಜಾರಿಯಲ್ಲಿದೆ ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಹೇಳಬೇಕಾದ ನಾವೇ ವಾತಾವರಣ ಶುದ್ಧಿಗೆ, ಲೋಕಕಲ್ಯಾಣಕ್ಕೆಂದು ಜನರಿಂದಲೂ ಓಣಿ ಓಣಿಯಲ್ಲಿ ಹೋಮ ಮಾಡಿಸುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಶಾಸಕರು ಬೇಕಿದ್ದರೆ ಮನೆಯಲ್ಲಿ ಹೋಮ ಮಾಡಿಕೊಳ್ಳಲಿ ಎಂದು ಹೇಳಿದರು.