ಶಿರಸಿ; ರಾಜ್ಯದಲ್ಲಿ ಸಂಭವಿಸಲಿದ್ದ ಮತ್ತೊಂದು ಆಕ್ಸಿಜನ್ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಘಟಕದಲ್ಲಿ ಸೋರಿಕೆಯಾಗಿದ್ದು, ಕೊರೊನಾ ಸೋಂಕಿತರು ಬೆಳಿಗ್ಗೆವರೆಗೂ ಪ್ರಾಣವಾಯುವಿಗಾಗಿ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.
ತಾಲೂಕು ಆಸ್ಪತ್ರೆಯ ಆಕ್ಸಿಜನ್ ಪೂರೈಕೆ ಯುನಿಟ್ ನಲ್ಲಿ ರಾತ್ರಿಯಿಂದಲೇ ಆಕ್ಸಿಜನ್ ಸೋರಿಕೆಯಾಗಿದೆ. ಆದರೆ ಈ ಬಗ್ಗೆ ಆಸ್ಪತ್ರೆಯ ವೈದ್ಯರಾಗಲಿ, ವೈದ್ಯಕೀಯ ಸಿಬ್ಬಂದಿಗಳಾಗಲಿ ಗಮನಿಸಿಯೇ ಇಲ್ಲ. ಇಂದು ಬೆಳಿಗ್ಗೆ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆಯಾಗದಿದ್ದಾಗ ಯುನಿಟ್ ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕ್ಸಿಜನ್ ಸೋರಿಕೆಯಾಗಿರುವ ವಿಚಾರ ಗಮನಕ್ಕೆ ಬಂದಿದೆ. ತಕ್ಷಣ ಸೋಂಕಿತರನ್ನು ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ತಲೆಗೆ ಹುಳ ಬಿಡುತ್ತೆ ವೈರಲ್ ಆಗಿರೋ ದೃಷ್ಟಿ ಭ್ರಮೆ ವಿಡಿಯೋ..!
ಸಧ್ಯ ತಾಂತ್ರಿಕ ಸಿಬ್ಬಂದಿಯನ್ನು ಕರೆಸಿ ಆಕ್ಸಿಜನ್ ಸೋರಿಕೆ ಸರಿಪಡಿಸಲಾಗಿದೆ. ಆಸ್ಪತ್ರೆ ಆಡಳಿತಾಧಿಕಾರಿಯ ನಿರ್ಲಕ್ಷವೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.