alex Certify ತಲೆಗೆ ಹುಳ ಬಿಡುತ್ತೆ ವೈರಲ್​ ಆಗಿರೋ ದೃಷ್ಟಿ ಭ್ರಮೆ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಗೆ ಹುಳ ಬಿಡುತ್ತೆ ವೈರಲ್​ ಆಗಿರೋ ದೃಷ್ಟಿ ಭ್ರಮೆ ವಿಡಿಯೋ..!

ಆಕಾಶಕ್ಕೆ ನಾವು ಹಾರಬಹುದು. ಆಕಾಶದಲ್ಲಿ ತೇಲಾಡಲೂಬಹುದು. ಆದರೆ ಎಂದಾದರೂ ಆಕಾಶದಲ್ಲೇ ಮುಳುಗೋದನ್ನ ಅನುಭವ ಮಾಡಿದ್ದೀರಾ..? ಅನುಭವ ಮಾಡೋದು ಹಾಗಿರಲಿ. ಎಂದಾದರೂ ಇಂತಹದ್ದೊಂದು ದೃಶ್ಯವನ್ನಾದರೂ ಕಣ್ತುಂಬಿಕೊಂಡಿದ್ದೀರಾ..?

ಸದ್ಯ ಇಂತಹದ್ದೊಂದು ವಿಚಿತ್ರ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದು ವೈರಲ್​ ಆಗೋದು ಮಾತ್ರವಲ್ಲದೇ ನೆಟ್ಟಿಗರ ನಡುವಿನ ಚರ್ಚಾ ವಿಷಯವಾಗಿ ಬದಲಾಗಿದೆ.

ಯುದ್ಧ ವಿರಾಮದ ಬಳಿಕವೂ ನಿಲ್ಲದ ಸಂಘರ್ಷ: ಇಸ್ರೆಲ್​ – ಪ್ಯಾಲೆಸ್ತಿನ್​​ ಪ್ರತಿಭಟನಾಕಾರರ ನಡುವೆ ನ್ಯೂಯಾರ್ಕ್‌ ನಲ್ಲಿ ಘರ್ಷಣೆ

ಕಪ್ಪು ಬಣ್ಣದ ಧಿರಿಸನ್ನ ಧರಿಸಿದ್ದ ವ್ಯಕ್ತಿಯು ಹಿಂಬದಿ ನೆಗತದ ಮೂಲಕ ಎತ್ತರದ ಸ್ಥಳದಿಂದ ಕೆಳಕ್ಕೆ ಜಿಗಿಯುತ್ತಾನೆ. ಈ ದೃಶ್ಯವನ್ನ ನೋಡುವಾಗ ನಿಮಗೆ ಆತನ ಕೆಳಗೆ ಆಕಾಶವಿದೆ ಎಂದೆನಿಸುತ್ತೆ. ಇದಾದ ಬಳಿಕ ಆತ ಆ ಆಕಾಶದ ಮಾದರಿಯ ರಚನೆಯಲ್ಲಿ ಮುಳುಗಿ ಹೋಗಿದ್ದಾನೆ. ಅನೇಕರು ಇದೊಂದು ರಿವರ್ಸ್ ಮಾಡಿರುವ ವಿಡಿಯೋ ಎಂದು ವಾದಿಸಿದ್ದಾರೆ. ಆದರೆ ಆತ ಆಕಾಶದ ಪ್ರತಿಫಲನವನ್ನ ಹೊಂದಿದ್ದ ಸಮುದ್ರಕ್ಕೆ ಜಿಗಿದಿದ್ದಾನೆ.

ಈ ವೈರಲ್​ ವಿಡಿಯೋ ನೆಟ್ಟಿಗರ ತಲೆಗೆ ಹುಳಬಿಟ್ಟಿದೆ. ಈ ವಿಡಿಯೋವನ್ನ ಜರ್ಮನಿಯ ಒಸ್ಟಾಲ್ಗು ಎಂಬಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲಿ ಆಲ್ಪ್​ಸೀ ಎಂಬ ಒಂದು ಪ್ರಸಿದ್ಧ ನದಿ ಇದೆ. ಈ ನದಿಯು ಎಷ್ಟು ತಿಳಿಯಾಗಿದೆ ಎಂದರೆ ಆಕಾಶದಲ್ಲಿರುವ ಮೋಡಗಳ ಚಿತ್ರಕೂಡ ನೀರಿನಲ್ಲಿ ಪ್ರತಿಫಲನವಾಗುತ್ತದೆ. ಇದೇ ಕಾರಣಕ್ಕೆ ಆತ ಆಕಾಶ ಒಳಕ್ಕೆ ಮುಳುಗಿದಂತೆ ಭಾಸವಾಗಿದೆ. ಅಂದಹಾಗೆ ಈ ದೃಷ್ಟಿಭ್ರಮೆಯ ವಿಡಿಯೋ ಬಗ್ಗೆ ನಿಮಗೆ ಏನೆನಿಸಿತು..?

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...