ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿರುವ ಸಿಡಿ ಯುವತಿಯ ಪೋಷಕರು ಆಡಿಯೋ ಹಾಗೂ ವಿಡಿಯೋದಲ್ಲಿರುವುದು ನಮ್ಮ ಮಗಳೇ ಎಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಡಿ ಯುವತಿಯ ತಂದೆ-ತಾಯಿ ಹಾಗೂ ಸಹೋದರರ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಆಡಿಯೋ ಹಾಗೂ ವಿಡಿಯೋದಲ್ಲಿರುವುದು ತಮ್ಮ ಮಗಳೆಂದು ಹೇಳಿದ್ದಾರೆ.
ಈ ವೇಳೆ ಯುವತಿಯ ತಂದೆ ಮೊದಲು ತಮ್ಮ ಮಗಳನ್ನು ತೋರಿಸಿ ಆಕೆ ಒಂದುವರೆ ತಿಂಗಳಿಂದ ಎಲ್ಲಿದ್ದಾಳೆ ಎಂದು ಗೊತ್ತಿಲ್ಲ. ಆಕೆಯ ಜೀವಕ್ಕೆ ಅಪಾಯವೂ ಇರಬಹುದು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಯುವತಿಯ ಸಹೋದರನಿಂದ 11 ಆಡಿಯೋಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸಿಡಿ ಹಿಂದಿನ ಮಹಾನಾಯಕನ ವಿಚಾರ; ಡಿಕೆಶಿಗೆ ಎಸ್.ಟಿ.ಎಸ್ ಟಾಂಗ್
ಮತ್ತೊಂದೆಡೆ ಯುವತಿ ಪರ ವಕೀಲ ಜಗದೀಶ್, ಯುವತಿಯ ಪೋಷಕರನ್ನು ಭೇಟಿಯಾಗಲು ಆಡುಗೋಡಿ ಎಸ್ಐಟಿ ತಾಂತ್ರಿಕ ವಿಭಾಗದ ಬಳಿ ಬಂದಿದ್ದು, ಈ ಸಂದರ್ಭದಲ್ಲಿ ಯುವತಿ ಪೋಷಕರ ಭೇಟಿಗೆ ಪೊಲೀಸರು ನಿರಾಕರಿಸಿದ್ದಾರೆ.