alex Certify ವಿಐಪಿಗಳನ್ನು ಭೇಟಿಯಾಗಲೆಂದೇ ರಾಗಿಣಿ ಬಳಿ ಇತ್ತು ಮತ್ತೊಂದು ಫ್ಲಾಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಐಪಿಗಳನ್ನು ಭೇಟಿಯಾಗಲೆಂದೇ ರಾಗಿಣಿ ಬಳಿ ಇತ್ತು ಮತ್ತೊಂದು ಫ್ಲಾಟ್…!

ನಟಿ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆಯೇ ಶಾಕ್‌ ನೀಡಿದ್ದಾರೆ. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಈಗಾಗಲೇ ವಿಚಾರಣೆಗೊಳಗಾಗಿರುವ ರವಿಶಂಕರ್‌ ಮಾಹಿತಿಯನ್ನಾಧರಿಸಿ ಆತನ ಗೆಳತಿಯಾಗಿದ್ದ ರಾಗಿಣಿ ನಿವಾಸದ ಮೇಲೆ ಇಂದು ದಾಳಿ ನಡೆಸಲಾಗಿದೆ.

ಯಲಹಂಕದಲ್ಲಿರುವ ರಾಗಿಣಿ ನಿವಾಸದ ಮೂಲೆ ಮೂಲೆಯನ್ನೂ ಸಿಸಿಬಿ ಪೊಲೀಸರು ಶೋಧಿಸುತ್ತಿದ್ದು, ಆಕೆಯ ಕಾರನ್ನೂ ಸಹ ಬಿಟ್ಟಿಲ್ಲ. ರಾಗಿಣಿಯವರ ನಾಲ್ಕು ಮೊಬೈಲ್‌ ಫೋನ್‌, ಎರಡು ಲ್ಯಾಪ್‌ ಟಾಪ್‌ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದ್ದು, ಅದರಲ್ಲಿರುವ ಮಾಹಿತಿಯ ಪರಿಶೀಲನೆ ನಡೆಸಲಾಗುತ್ತಿದೆ.

ಮಹತ್ವದ ಸಂಗತಿಯೆಂದರೆ ರಾಗಿಣಿ ಇಂದಿರಾನಗರದಲ್ಲಿ ಮತ್ತೊಂದು ಫ್ಲಾಟ್‌ ಹೊಂದಿದ್ದು, ಇದನ್ನು ವಿಐಪಿಗಳನ್ನು ಭೇಟಿ ಮಾಡಲು ಮಾತ್ರ ಬಳಸುತ್ತಿದ್ದರೆನ್ನಲಾಗಿದೆ. ಸ್ನೇಹಿತ ಸಿಕ್ಕಿಬಿದ್ದರೆ ನನ್ನನ್ಯಾಕೆ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದ ರಾಗಿಣಿಗೆ ಈಗ ಸಿಸಿಬಿ ದಾಳಿ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ರವಿಶಂಕರ್‌ ನೀಡಿರುವ ಮಹತ್ವದ ಮಾಹಿತಿಗಳನ್ನಾಧರಿಸಿ ಆಕೆಯನ್ನೂ ಈಗ ಬಂಧಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...