alex Certify ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ್ದ KSRTC ಬಸ್‌ ಸಂಚಾರ ಇಂದಿನಿಂದ ‌ʼಬಂದ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ್ದ KSRTC ಬಸ್‌ ಸಂಚಾರ ಇಂದಿನಿಂದ ‌ʼಬಂದ್ʼ

ಕಳೆದ ಒಂದು ವಾರದಿಂದ ವಲಸೆ ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಸರ್ಕಾರ ತಲುಪಿಸಿದೆ. ಕಳೆದ ಏಳು ದಿನಗಳಿಂದ ಬೆಂಗಳೂರಿನಿಂದ ರಾಜ್ಯದ ವಿವಿಧ ವಿಭಾಗಗಳಿಗೆ ಅಂದಾಜು 1,‌08,300 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ. ವಲಸೆ ಕಾರ್ಮಿಕರಿಗಾಗಿ ಉಚಿತ ಬಸ್ ಸೇವೆಯನ್ನು 5 ದಿನ ನೀಡಿತ್ತು ಸರ್ಕಾರ. ಈ ವೇಳೆ ಕೆ.ಎಸ್.ಆರ್.ಟಿ.ಸಿ.ಯ 3610 ಬಸ್ಸುಗಳನ್ನು ಸಂಚರಿಸಿವೆ. ಬೆಂಗಳೂರು ನಗರದಿಂದಲೇ ಏಳು ದಿನಗಳಿಂದ ಒಟ್ಟು 2288 ಬಸ್ಸುಗಳು ಸಂಚಾರ ಮಾಡಿವೆ.

ಕಾರ್ಮಿಕರಿಗಾಗಿ‌ ಉಚಿತ ಬಸ್‌ ವ್ಯವಸ್ಥೆ ನಿನ್ನೆಗೆ ಕೊನೆಗೊಂಡಿದೆ. ಬೆಂಗಳೂರು ಕೆಂಪು ವಲಯದಲ್ಲಿರುವುದರಿಂದ ನಿನ್ನೆಯಿಂದ ಯಾವುದೇ ಬಸ್ಸುಗಳು ಬೆಂಗಳೂರಿನಿಂದ ಬೇರೆ ಸ್ಥಳಗಳಿಗೆ ಕಾರ್ಯಚರಣೆ ಮಾಡುತ್ತಿಲ್ಲ. ದರ ವಿಧಿಸಿ ಕಾರ್ಯಚರಣೆಯಾಗುವ ಬಸ್ಸುಗಳೂ ಸಂಚಾರ ಮಾಡುವುದಿಲ್ಲ.

ಆದರೆ ಬೇರೆ ರಾಜ್ಯಕ್ಕೆ ಹೋಗುವ ಅಂತರ್ ರಾಜ್ಯ ವಲಸೆ ಕಾರ್ಮಿಕರ ಪರಿಸ್ಥಿತಿ ಯಾರೂ ಕೇಳದಂತಾಗಿದೆ. ಅಂತರ್ ಜಿಲ್ಲೆಗಳಿಗೇನೊ ವಲಸೆ ಕಾರ್ಮಿಕರನ್ನು ಕಳುಹಿಸಲಾಯಿತು. ಆದರೆ ಬೇರೆ ರಾಜ್ಯಗಳ ಕಾರ್ಮಿಕರ ಗೋಳು ಕೇಳುತ್ತಿಲ್ಲ. ತಮ್ಮ ರಾಜ್ಯಕ್ಕೆ ಹೋಗದೇ, ಇಲ್ಲಿಯೂ ಇರಲಾಗದೆ ಪರದಾಡುವಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...