alex Certify ರೌಡಿ ಶೀಟರ್ ಜೊತೆ ರಾತ್ರಿಯಿಡೀ ಪಾರ್ಟಿ ಮಾಡಿದ ಎಸ್ಐ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೌಡಿ ಶೀಟರ್ ಜೊತೆ ರಾತ್ರಿಯಿಡೀ ಪಾರ್ಟಿ ಮಾಡಿದ ಎಸ್ಐ

 

ಕೊರೊನಾದಿಂದಾಗಿ ದೇಶವೇ ಲಾಕ್ ಡೌನ್ ಆಗಿದೆ. ಕೊರೊನಾ ಸೋಂಕು ಹರಡದಂತೆ ಕೊರೊನ ವಾರಿಯರ್ಸ್ ಹೋರಾಡುತ್ತಿದ್ದಾರೆ. ಮೊನ್ನೆಯಷ್ಟೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯದಂಗಡಿ ತೆರೆದಾಗಿನಿಂದಲೂ ಒಂದಲ್ಲ ಒಂದು ಅವಾಂತರ ಆಗುತ್ತಲೇ ಇದೆ. ಇದೀಗ ಪೊಲೀಸಪ್ಪರೊಬ್ಬರು ಎಣ್ಣೆ ಅಂಗಡಿ ತೆರೆಯೋದಕ್ಕೂ ಮುನ್ನವೇ ಮದ್ಯದಿಂದ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ಪಿರಿಯಾಪಟ್ಟಣದ ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್ಐ ಲೊಕೇಶ್ ಎಂಬುವವರು ಏಪ್ರಿಲ್ 17 ರಂದು ಫುಲ್ ಪಾರ್ಟಿ ಮಾಡಿದ್ದಾರೆ. ಅದು ರೌಡಿ ಶೀಟರ್ ಜೊತೆಯಲ್ಲಿ. ರಾತ್ರಿಯಿಂದ ಬೆಳಗಿನ ಜಾವದವರೆಗೂ ಮದ್ಯ ಸೇವಿಸಿ ನಂತರ ಫೋಟೋ ಸೆಷನ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಲೋಕೇಶ್ ಮೇಲೆ ಪಿರಿಯಾಪಟ್ಟಣದ ನಿವಾಸಿಯಾಗಿರುವ ಅಣ್ಣಯ್ಯ ಎಂಬುವವರು ಡಿವೈಎಸ್ಪಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ವಿಚಾರಣೆ ನಡೆಸಿದಾಗ ಕರ್ತವ್ಯ ಲೋಪ ಕಂಡು ಬಂದಿದ್ದು, ಲೋಕೇಶ್ ಅವರನ್ನು ಅಮಾನತು ಮಾಡಲಾಗಿದೆ. ಕೊರೊನಾ ಸಮಯದಲ್ಲಿ ಕೆಲಸ ಬಿಟ್ಟು ಇಂಥಹ ಕೆಲಸ ಯಾಕೆ ಬೇಕಿತ್ತು ಎನ್ನುತ್ತಿದ್ದಾರೆ ಸಾರ್ವಜನಿಕರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...