ಬೆಂಗಳೂರು: ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಇನ್ಫೋಕಾಮ್ ನಿಂದ ಬೆಂಗಳೂರು ಸಂಚಾರ ಪೊಲೀಸರನ್ನು ಗೌರವಿಸಲಾಯಿತು. ಬೆಂಗಳೂರು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಿಲಯನ್ಸ್ ಗ್ರೂಪ್ ನಿಂದ 50,000 N95 ಮಾಸ್ಕ್ ಹಾಗೂ ಅಷ್ಟೇ ಸಂಖ್ಯೆಯ ಸ್ಯಾನಿಟೈಸರ್ ದೇಣಿಗೆ ನೀಡಲಾಯಿತು.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದಣಿವರಿಯದೆ ಕೆಲಸ ಮಾಡುತ್ತಿರುವ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ಶ್ಲಾಘಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್ ರವಿಕಾಂತೇಗೌಡ ಇದ್ದರು.
ರಿಲಯನ್ಸ್ ಸಮೂಹದ ಪ್ರತಿನಿಧಿಯಾಗಿ ರಿಲಯನ್ಸ್ ಜಿಯೋ ಕರ್ನಾಟಕದ ಸಿಇಒ ಅಮಿತಾಬ್ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಉಪಾಧ್ಯಕ್ಷರಾದ ಜಿಮ್ಮಿ ಅಮ್ರೋಲಿಯಾ ಹಾಜರಿದ್ದರು.
ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಹಗಲಿರುಳು ಶ್ರಮಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ, ತಡೆಗೆ ಈಗಾಗಲೇ ಹಲವು ಬಗೆಯಲ್ಲಿ ನೆರವು ಸಹ ನೀಡುತ್ತಿದ್ದು, ಇದರ ಭಾಗವಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗಿದೆ.