alex Certify ರಸ್ತೆಯಲ್ಲಿ ಹಣ ಬಿದ್ದಿದ್ದರೂ ಮುಟ್ಟಲು ಹಿಂಜರಿದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ಹಣ ಬಿದ್ದಿದ್ದರೂ ಮುಟ್ಟಲು ಹಿಂಜರಿದ ಜನ…!

ದೇಶದಲ್ಲಿ ಕಾಣಿಸಿಕೊಂಡಿರುವ ಕರೋನಾ ವೈರಸ್ ಜನ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ದುಡಿಮೆಗೆ ದಾರಿಯಾಗದೆ ಆರ್ಥಿಕವಾಗಿ ಕಂಗೆಟ್ಟಿದ್ದು, ಈ ಮಹಾಮಾರಿ ಯಾವಾಗ ತೊಲಗುತ್ತದೋ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕರೋನಾ ಸಾರ್ವಜನಿಕರಲ್ಲಿ ಎಷ್ಟರಮಟ್ಟಿಗೆ ಭೀತಿ ಹುಟ್ಟಿಸಿದೆ ಎಂದರೆ ರಸ್ತೆಯಲ್ಲಿ ಹಣ ಬಿದ್ದಿದ್ದರೂ ಸಹ ಅದನ್ನು ಮುಟ್ಟಿದರೆ ಎಲ್ಲಿ ತಮಗೆ ಕರೋನಾ ಸೋಂಕು ತಗಲುತ್ತದೋ ಎಂಬ ಆತಂಕ ಕಾಡುತ್ತಿದೆ. ಇದಕ್ಕೆ ಉದಾಹರಣೆಯೊಂದು ಇಲ್ಲಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಾರಣಗಿರಿ ಸಮೀಪದ ಹನಿಯ ಎಂಬಲ್ಲಿ ರಸ್ತೆ ಬದಿ ಪ್ಲಾಸ್ಟಿಕ್ ಪೊಟ್ಟಣ ಒಂದು ಬಿದ್ದಿದ್ದು, ಇದರಲ್ಲಿ 2 ಸಾವಿರ ಮುಖಬೆಲೆಯ ಎರಡು ಮತ್ತು 500 ಮುಖಬೆಲೆಯ ಎರಡು ನೋಟುಗಳು ಇದ್ದವು. ಆದರೆ ಇದನ್ನು ಮುಟ್ಟಲು ಹಿಂಜರಿದ ಸಾರ್ವಜನಿಕರು, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಈಗ ಇದು ಯಾರಿಗೆ ಸೇರಿದ್ದೆಂಬುದರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...