alex Certify ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; SIT ಮುಖ್ಯಸ್ಥರಿಲ್ಲದೇ ತನಿಖೆ ನಡೆದಿದ್ದು ಹೇಗೆ…..?; ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; SIT ಮುಖ್ಯಸ್ಥರಿಲ್ಲದೇ ತನಿಖೆ ನಡೆದಿದ್ದು ಹೇಗೆ…..?; ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿರುವ ಹೈಕೊರ್ಟ್, ಎಸ್ ಐ ಟಿ ಮುಖ್ಯಸ್ಥರಿಲ್ಲದೇ ತನಿಖೆ ಹೇಗೆ ನಡೆದಿದೆ ಎಂದು ಕೇಳಿದೆ.

ಸಿಡಿ ಬಹಿರಂಗ ಪ್ರಕರಣದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್, ಎಸ್ ಐ ಟಿಗೆ ಹಿರಿಯ ಅಧಿಕಾರಿ ನೇಮಕದ ಉದ್ದೇಶ ಅವರ ಅನುಭವ ಹಾಗೂ ಹಿರಿತನ ತನಿಖೆಗೆ ನೆರವಾಗಬೇಕು. ಆದರೆ ಈ ಪ್ರಕರಣದಲ್ಲಿ ಅಧಿಕಾರಿ ರಜೆಯಲ್ಲಿದ್ದರೂ ತನಿಖೆ ನಡೆದಿರುವುದು ಹೇಗೆ ಎಂದು ಪ್ರಶ್ನಿಸಿದೆ.

ಗುಡ್ ನ್ಯೂಸ್: ಭಾರತೀಯ ರೈಲ್ವೇಯಿಂದ 1600 ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್ ಐ ಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಸುದೀರ್ಘ ರಜೆಯಲ್ಲಿದ್ದರು. ಅವರ ಅನುಪಸ್ಥಿತಿಯಲ್ಲಿ ರಮೇಶ್ ಜಾರಕಿಹೊಳಿ ಪ್ರಕರಣದ ತನಿಖೆ ನಡೆದಿದೆ. ಸೌಮೆಂದು ಮುಖರ್ಜಿ ತನಿಖೆಯನ್ನು ಬೇರೆಯವರಿಗೆ ವರ್ಗಾಯಿಸಿಲ್ಲ, ಕೇವಲ ವರದಿ ಸಲ್ಲಿಸುವ ಕೆಲಸ ಮಾತ್ರ ವರ್ಗಾಯಿಸಿದ್ದಾರೆ. ಈ ಬಗ್ಗೆ ಎಸ್ ಐ ಟಿ ಮುಖ್ಯಸ್ಥರೇ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಪ್ರತ್ಯೇಕ ಪ್ರಮಾಣಪತ್ರದಲ್ಲಿ ನಿಲುವು ತಿಳಿಸಬೇಕು ಎಂದು ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...