alex Certify ಮೃತ ಪತ್ನಿಯ ಪುತ್ಥಳಿ ನಿರ್ಮಿಸಿ ಗೃಹ ಪ್ರವೇಶ ಮಾಡಿದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತ ಪತ್ನಿಯ ಪುತ್ಥಳಿ ನಿರ್ಮಿಸಿ ಗೃಹ ಪ್ರವೇಶ ಮಾಡಿದ ಪತಿ…!

ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಆಸೆಯಂತೆ ಮನೆ ನಿರ್ಮಿಸಿ ಪತ್ನಿ ಮೃತಪಟ್ಟಿದ್ದ ಕಾರಣ ಪುತ್ಥಳಿಯೊಂದಿಗೆ ಗೃಹಪ್ರವೇಶ ಮಾಡುವ ಮೂಲಕ ಪತ್ನಿಯ ಕೊನೆಯಾಸೆಯನ್ನು ಈಡೇರಿಸಿದ್ದಾರೆ. ಇಂಥದೊಂದು ಅಪರೂಪದ ಘಟನೆ ಕೊಪ್ಪಳ ತಾಲೂಕಿನ ಭಾಗ್ಯ ನಗರದಲ್ಲಿ ನಡೆದಿದೆ.

ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾ ಹಾಗೂ ಅವರ ಪತ್ನಿ ವೆಂಕಟನಾಗ ಮಾಧವಿ ಸುಸಜ್ಜಿತ ಮನೆಯೊಂದನ್ನು ನಿರ್ಮಿಸುವ ಕನಸು ಕಂಡಿದ್ದರು. ಆದರೆ ಮೂರು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ವೆಂಕಟನಾಗ ಮಾಧವಿ ಮೃತಪಟ್ಟಿದ್ದರು.

ಪತ್ನಿಯ ಆಸೆಯನ್ನು ನೆರವೇರಿಸಬೇಕು ಎಂಬ ಕಾರಣಕ್ಕೆ ಶ್ರೀನಿವಾಸ ಗುಪ್ತಾ ಮನೆಯೊಂದನ್ನು ನಿರ್ಮಿಸಿ, ಗೃಹ ಪ್ರವೇಶದ ಸಂದರ್ಭದಲ್ಲಿ ನಿಜ ಮನುಷ್ಯರಂತೆ ಕಾಣುವ ಪತ್ನಿಯ ಪುತ್ಥಳಿಯನ್ನು ಮಾಡಿಸಿದ್ದಾರೆ. ಪುತ್ಥಳಿಯೊಂದಿಗೆ ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...