ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ನಡುವೆ ಶೇಖ್ ಫಾಝಿಲ್ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಸ್ಯಾಂಡಲ್ ವುಡ್, ಬಾಲಿವುಡ್ ನ ಸ್ಟಾರ್ ನಟಿಯರೇ ಇನ್ವಿಟೇಷನ್ ಕಾರ್ಡ್ ಗಳು ಎಂಬ ಮಾಹಿತಿ ಬಹಿರಂಗವಾಗಿದೆ.
ಡ್ರಗ್ ಮಾಫಿಯಾ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಝಿಲ್ ಶ್ರೀಲಂಕಾದ ಕೊಲಂಬೋದಲ್ಲಿ ಕ್ಯಾಸಿನೋ ಮಾಲೀಕರಿಂದ ಹಣ ಪಡೆದು ಭಾರೀ ಪ್ರಮಾಣದ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದ. ಈ ಪಾರ್ಟಿಗೆ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನ ಖ್ಯಾತ ನಟಿಯರನ್ನು ಆಹ್ವಾನಿಸುತ್ತಿದ್ದ. ಈ ನಟಿ ಮಣಿಯರಿಂದಲೇ ಡ್ರಗ್ಸ್, ಗ್ರಾಹಕರಿಗೆ ಸೇರುತಿತ್ತು ಎನ್ನಲಾಗಿದೆ.
ಖ್ಯಾತ ನಟಿಯರಾದ ತಾಪ್ಸಿ ಪನ್ನು, ಊರ್ವಶಿ ರೌಟೆಲಾ, ಐಂದ್ರಿತಾ ರೇ ಸೇರಿದಂತೆ ಪ್ರಮುಖ ನಟಿಯರು ಶೇಖ್ ಫಾಝಿಲ್ ಆಯೋಜಿಸುತ್ತಿದ್ದ ಕ್ಯಾಸಿನೋ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಈ ಎಲ್ಲಾ ನಟಿಯರ ಜತೆ ಮಾಡೆಲ್ ಗಳನ್ನು ಕರೆಸುತ್ತಿದ್ದ. ಫಾಝಿಲ್ ಪಾರ್ಟಿಗೆ ಬರುವಂತೆ ಸ್ವತ: ನಟಿಯರೇ ಆಹ್ವಾನವನ್ನು ನೀಡುತ್ತಿದ್ದರು. ಈ ಕುರಿತ ವಿಡಿಯೋ ಇದೀಗ ವೈರಲ್ ಆಗಿವೆ.
ಲಕ್ಷ ಲಕ್ಷ ಹಣ ನೀಡಿ ಮಿಡ್ ನೈಟ್ ಪಾರ್ಟಿಗಳಿಗೆ ನಟಿಯರನ್ನು ಬಳಸಲಾಗುತ್ತಿದ್ದು, ಈ ಪಾರ್ಟಿಗೆ ಶ್ರೀಮಂತ ಕುಳಗಳನ್ನು ಆಹ್ವಾನಿಸಲಾಗುತ್ತಿತ್ತು. ಈ ರೀತಿಯ ಪಾರ್ಟಿ ಆಯೋಜನೆ, ಮೋಜು-ಮಸ್ತಿ, ಡ್ರಗ್ಸ್ ದಂಧೆಗಳ ಮೂಲಕ ಫಾಝಿಲ್ ಹಣ ಗಳಿಸುತಿದ್ದ ಎಂಬ ಅಂಶ ಬಯಲಾಗಿದೆ.