alex Certify 3.5 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರು ಖರೀದಿಸಿದ​ ನಟಿ ತಾಪ್ಸಿ ಪನ್ನು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3.5 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರು ಖರೀದಿಸಿದ​ ನಟಿ ತಾಪ್ಸಿ ಪನ್ನು

Bollywood Actress Taapsee Pannu Buys Mercedes-Maybach GLS600 SUV Worth Rs  3.5 Crore | Auto News | Zee News

ಬಾಲಿವುಡ್​ ನಟಿ ತಾಪ್ಸಿ ಪನ್ನು ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರ್ತಾರೆ. ಈ ಬಾರಿ ತಾಪ್ಸಿ ಪನ್ನು ಹೊಸ ಎಸ್​​ಯುವಿ ಖರೀದಿ ಮಾಡಿದ್ದಾರೆ. 3.5 ಕೋಟಿ ರೂಪಾಯಿಗೂ ಅಧಿಕ ಮೌಲ್ಯವನ್ನು ಹೊಂದಿರುವ ಹೊಚ್ಚ ಹೊಸ Mercedes-Maybach GLS600 SUVಯನ್ನು ಮನೆಗೆ ತಂದಿದ್ದಾರೆ.

ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಹಾಗೂ ಐಷಾರಾಮಿ ಎಸ್​ಯುವಿಗಳಲ್ಲಿ ಮರ್ಸಿಡಿಸ್​ ಮೇಬ್ಯಾಕ್​ ಕೂಡ ಒಂದು. ಬೆಂಟ್ಲಿ ಬೆಂಟೈಗಾ ಹಾಗೂ ರೋಲ್ಸ್​​ ರಾಯ್ಸ್​​ ಕುಲ್ಲಿನನ್​​​ನಂತಹ ಐಷಾರಾಮಿ ಕಾರುಗಳಿಗೆ ಸ್ಪರ್ಧೆ ನೀಡುತ್ತಿದೆ. ಈಗಾಗಲೇ ಅನೇಕ ಸೆಲಿಬ್ರಿಟಿಗಳು ಮರ್ಸಿಡೀಸ್​ ಮೇಬ್ಯಾಕ್​ ಖರೀದಿ ಮಾಡಿದ್ದಾರೆ.

ಆಯುಷ್ಮಾನ್​ ಖುರಾನಾ, ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್,​ ಅಜಯ್​ ದೇವಗನ್​, ಆದಿತ್ಯ ರಾಯ್​ಕಪೂರ್, ಅರ್ಜುನ್​ ಕಪೂರ್​, ಶಿಲ್ಪಾ ಶೆಟ್ಟಿ ಹಾಗೂ ತೆಲುಗು ಫೇಮಸ್​ ನಟ ರಾಮ್​ಚರಣ್​ ಕೂಡ ಈ ಕಾರನ್ನು ಖರೀದಿಸಿದ್ದಾರೆ.

ತಾಪ್ಸಿ ಪಲ್ಲಾಡಿಯಂ ಸಿಲ್ವರ್​ ಬಣ್ಣದ ಎಸ್​ಯುವಿ ಖರೀದಿ ಮಾಡಿದ್ದಾರೆ. ಇದನ್ನು ಹೊರತುಪಡಿಸಿ ಈ ಎಸ್​ಯುವಿ ಬ್ರಿಲಿಯಂಟ್​ ಬ್ಲೂ, ಕ್ಯಾವನ್​ಸೈಟ್​ ಬ್ಲೂ, ಎಮರಾಲ್ಡ್​ ಗ್ರೀನ್​, ಇರಿಡಿಯಂ ಸಿಲ್ವರ್​, ಮೊಜಾವೆ ಸಿಲ್ವರ್​, ಅಬ್ಸಿಡಿಯನ್​ ಬ್ಲ್ಯಾಕ್​, ಪೋಲಾರ್​ ವೈಟ್​ ಹಾಗೂ ಸೆಲ್​ನೈಟ್​ ಸಿಲ್ವರ್​ ಸೇರಿದಂತೆ ಇನ್ನೂ ಅನೇಕ ಬಣ್ಣಗಳಲ್ಲಿ ಲಭ್ಯವಿದೆ.

ತಾಪ್ಸಿ ಪನ್ನು ಖರೀದಿ ಮಾಡಿರುವ ಈ ಅಲ್ಟ್ರಾ ಐಷಾರಾಮಿ ಕಾರು ಅತ್ಯಂತ ದೊಡ್ಡ ಒಳಾಂಗಣ ಹೊಂದಿದೆ. ಎಸ್​ಯುವಿ ಲೌಂಜ್​ ಶೈಲಿಯ ಆಸನ ಹಾಗೂ ವಿಹಂಗಮ ಸನ್​ರೂಫ್​​ ಜೊತೆ ಬರ್ಮೆಸ್ಟರ್​ ಸೌಂಡ್​ ಸಿಸ್ಟಂ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...