alex Certify ಮಾಸ್ಕ್ ಧರಿಸದಿದ್ದಕ್ಕೆ ದಂಡ ವಿಧಿಸಲು ಮುಂದಾದ ಅಧಿಕಾರಿಗಳಿಗೆ ಪೊಲೀಸ್ ಪೇದೆ ಆವಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸದಿದ್ದಕ್ಕೆ ದಂಡ ವಿಧಿಸಲು ಮುಂದಾದ ಅಧಿಕಾರಿಗಳಿಗೆ ಪೊಲೀಸ್ ಪೇದೆ ಆವಾಜ್

ರಾಜ್ಯದಲ್ಲಿ ಮಾರಕ ಕೊರೊನಾ ಅಬ್ಬರಿಸುತ್ತಿರುವ ಕಾರಣ ಇದರ ನಿಯಂತ್ರಣಕ್ಕಾಗಿ ಸರ್ಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗಿದ್ದು, ಆದರೆ ಬಹುತೇಕರು ಈ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ.

ಹೀಗಾಗಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ರಾಜ್ಯದ ವಿವಿಧ ನಗರಪಾಲಿಕೆಗಳು ಮುಂದಾಗಿವೆ. ಹೀಗೆ ಮಾಸ್ಕ್ ಧರಿಸದ ಪೊಲೀಸ್ ಪೇದೆಯೊಬ್ಬರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಲು ಮುಂದಾದಾಗ ಅವರಿಗೆ ಪೇದೆ ಆವಾಜ್ ಹಾಕಿರುವ ಘಟನೆ ನಡೆದಿದೆ.

ನೆಹರು ರಸ್ತೆಯಲ್ಲಿ ಮಾಸ್ಕ್ ಧರಿಸದೆ ಪೇದೆ ಬೈಕ್ ನಲ್ಲಿ ಬರುತ್ತಿದ್ದು, ಈ ವೇಳೆ ಅಧಿಕಾರಿಗಳು ತಡೆದು 200 ರೂಪಾಯಿ ದಂಡ ವಿಧಿಸಲು ಮುಂದಾಗಿದ್ದಾರೆ. ಆಗ, ನಾನು ಪೊಲೀಸ್. ನನಗೇ ದಂಡ ವಿಧಿಸುತ್ತಿರಾ ಎಂದು ಕೇಳಿದ ಪೇದೆ ಠಾಣೆಗೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಆಗ ಪಾಲಿಕೆ ಅಧಿಕಾರಿಗಳು ಮೊದಲು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ಹೋಗೋಣ. ಆ ಬಳಿಕ ನಿಮ್ಮ ಠಾಣೆಗೆ ಬರುತ್ತೇವೆ ಎಂದು ಹೇಳಿದ್ದು, ಇದನ್ನು ಕೇಳಿದ ಕೂಡಲೇ ತಣ್ಣಗಾದ ಪೊಲೀಸ್ ಪೇದೆ 200 ರೂಪಾಯಿ ದಂಡ ಪಾವತಿಸಿ ಅಲ್ಲಿಂದ ತೆರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...