alex Certify ಮಾಸ್ಕ್‌ ಧರಿಸದೆ ಮನೆಯಿಂದ ಹೊರ ಬಿದ್ದರೆ ಬೀಳಲಿದೆ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್‌ ಧರಿಸದೆ ಮನೆಯಿಂದ ಹೊರ ಬಿದ್ದರೆ ಬೀಳಲಿದೆ ದಂಡ

ಶಿವಮೊಗ್ಗ: ಮಾಸ್ಕ್ ಧರಿಸದೇ ಇರುವವರು ಇನ್ನು ಮುಂದೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಏಕೆಂದರೆ ಮಹಾ ನಗರಪಾಲಿಕೆ ಈಗಾಗಲೇ ಮಾಸ್ಕ್ ಧರಿಸದೇ ಇರುವವರಿಗೆ ಕಡ್ಡಾಯವಾಗಿ ದಂಡ ಹಾಕುತ್ತಿದೆ.

ಮಾಸ್ಕ್ ಧರಿಸದೇ ಇರುವವರಿಗೆ ಸ್ಥಳದಲ್ಲಿಯೇ ರೂ.200 ದಂಡ ವಿಧಿಸುತ್ತಿದೆ. ನಿನ್ನೆ ಒಂದೇ ದಿನ 43,000ಕ್ಕೂ ಹೆಚ್ಚು ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.

ಪಕ್ಕದ ಜಿಲ್ಲೆ ದಾವಣಗೆರೆಯಲ್ಲಿ ಕೊರೋನಾ ಸೋಂಕು ಜಾಸ್ತಿಯಾಗಿರುವುದರಿಂದ ಶಿವಮೊಗ್ಗದಲ್ಲಿಯೂ ಕೂಡ ಆತಂಕವಾಗಿದೆ. ಅದರಲ್ಲೂ ಹಸಿರು ವಲಯ ಎಂದು ಸಡಿಲಗೊಳಿಸಿರುವುದರಿಂದ ಜನರ ಓಡಾಟ ಹೆಚ್ಚಾಗಿದೆ. ಹಲವರು ಮಾಸ್ಕ್ ನ್ನು ಧರಿಸದೇ ಓಡಾಡುತ್ತಿರುವುದು ಕಂಡು ಬಂದಿದೆ.

ಇದನ್ನು ಕಡ್ಡಾಯವಾಗಿ ಪರಿಪಾಲಿಸಲು ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಕೂಡ ಜನರು ಮಾತು ಕೇಳುತ್ತಿಲ್ಲ. ಈ ಹಿನ್ನಲೆಯಲ್ಲಿ ದಂಡ ಹಾಕುವುದು ಅನಿವಾರ್ಯವಾಗಿದೆ. 10-15 ರೂ.ಕೊಟ್ಟರೆ ಮಾಸ್ಕ್ ಸಿಗುತ್ತದೆ. ಅಥವಾ ಮನೆಯಲ್ಲಿ ಮಾಸ್ಕ್ ತಯಾರಿಸಿಯೂ ಹಾಕಿಕೊಳ್ಳಬಹುದಾಗಿದೆ.

ಆದರೂ ಮಾಸ್ಕ್ ಧರಿಸದೇ ಇರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಇಂದು ಕೂಡ ದಂಡದ ಪ್ರಕ್ರಿಯೆ ಮುಂದುವರೆದಿದೆ. ಗೋಪಿ ವೃತ್ತ, ಜೈಲು ರಸ್ತೆ, ಲಕ್ಷ್ಮಿ ಚಿತ್ರಮಂದಿರದ ಹತ್ತಿರ ಮುಂತಾದ ಕಡೆಗಳಲ್ಲಿ ದಂಡ ವಿಧಿಸಲಾಗುತ್ತಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...