ಬೆಂಗಳೂರು: ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿಯೇ ನೌಕರನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ ನಲ್ಲಿ ನಡೆದಿದೆ.
30 ವರ್ಷದ ಪಾಂಡಿ ಪ್ರಭು ಮೃತ ನೌಕರ. ಮಾಜಿ ಕಾರ್ಪೊರೇಟರ್ ಧನರಾಜ್ ಅವರ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪ್ರಭು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಗಂಡನ ಸೇರುವ ತವಕದಲ್ಲಿದ್ದ ಮಹಿಳೆ ಲಾಡ್ಜ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ, ವಿಡಿಯೋ ಮಾಡಿ ಕಿರುಕುಳ
ಪ್ರಭು ರಾತ್ರಿ ಕಚೇರಿಯಲ್ಲಿಯೇ ಇಬ್ಬರು ಯುವಕರ ಜೊತೆ ಮಲಗಿದ್ದ. ಆದರೆ ಬೆಳಗಾಗುವಷ್ಟರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪ್ರಭು ಶವ ಪತ್ತೆಯಾಗಿದೆ. ಧನರಾಜ್ ಕಡೆಯವರೇ ಪ್ರಭುನನ್ನು ಕೊಲೆಗೈದು ಬಳಿಕ ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ್ದಾಗಿ ಪ್ರಭು ಸಹೋದರಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.