
ಹೌದು, ಹೆಬ್ಬೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಗಂಗಮ್ಮ ಎಂಬವರು ಮತದಾರರಿಗೆ ವಿತರಿಸಿರುವ ಕರಪತ್ರದಲ್ಲಿ ಗೆದ್ದರೆ ತಾವು ಮಾಡುವ ಕೆಲಸಗಳ ಜೊತೆಗೆ ಸೋತರೆ ಏನು ಮಾಡುತ್ತೇನೆ ಎಂಬುದನ್ನೂ ಸಹ ಇದರಲ್ಲಿ ವಿವರಿಸಿದ್ದಾರೆ. ಜೊತೆಗೆ ಈ ಕೆಲಸಗಳನ್ನು ಮಾಡಿಯೇ ತೀರುತ್ತೇನೆ ಎಂಬುದಕ್ಕೆ ಪುರಾವೆಯಾಗಿ ಸಾಕ್ಷಿಯೊಂದನ್ನು ಸಹ ನೀಡಿದ್ದಾರೆ.
‘ಪಾದರಕ್ಷೆಗಳು’ ಗುರುತನ್ನು ಪಡೆಯದಿರುವ ಗಂಗಮ್ಮ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾರೋ ಸೋಲುತ್ತಾರೋ ಎಂಬುದನ್ನು ಕಾದುನೋಡಬೇಕಿದೆ. ಆದರೆ ಮತದಾರರಿಗೆ ಅವರು ವಿತರಿಸಿರುವ ಕರಪತ್ರ ಎಲ್ಲರ ಗಮನ ಸೆಳೆದಿರುವುದಂತೂ ಸತ್ಯ.