ಡ್ರಗ್ಸ್ ಹಗರಣದಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾಗಿದ್ದು, ಇದರ ಮಧ್ಯೆ ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ ತಮ್ಮ ಫ್ಲಾಟ್ ಮಾರಾಟಕ್ಕಿಟ್ಟಿರುವ ವಿಚಾರ ಅಚ್ಚರಿಗೆ ಕಾರಣವಾಗಿತ್ತು. ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ರಾಕೇಶ್ ದ್ವಿವೇದಿ ಮಗಳ ವಿಚಾರದಲ್ಲಿ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದಾರೆಂದು ಹೇಳಲಾಗಿತ್ತು.
ಇದೀಗ ರಾಗಿಣಿ ಅವರ ತಾಯಿ ರೋಹಿಣಿ ದ್ವಿವೇದಿ, ತಾವು ಮನೆ ಮಾರಾಟಕ್ಕಿಟ್ಟಿರುವ ಹಿಂದಿನ ಕಾರಣವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದು, ತಮ್ಮ ಮಗಳನ್ನು ಗೌರವಯುತವಾಗಿ ಹೊರಗೆ ಕರೆ ತರಲು ಈ ತೀರ್ಮಾನ ಕೈಗೊಂಡಿದ್ದೇವೆ ಎಂದಿದ್ದಾರೆ. ಈ ಮೂಲಕ ಖ್ಯಾತ ವಕೀಲರನ್ನು ರಾಗಿಣಿ ಪರ ವಾದ ಮಂಡಿಸಲು ನೇಮಿಸುವ ಸೂಚನೆ ನೀಡಿದ್ದಾರೆ.
ರಾಗಿಣಿ ಪಾರ್ಟಿಯಲ್ಲಿ ಭಾಗವಹಿಸಿದ್ದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದ ಅವರು, ನನ್ನ ಮಗಳು ಹೆಣ್ಣುಹುಲಿ. ಯಾವುದಕ್ಕೂ ಆಕೆ ಅಂಜುವುದಿಲ್ಲ. ಈ ಪ್ರಕರಣದಿಂದ ಖಂಡಿತವಾಗಿಯೂ ಹೊರಬರುತ್ತಾಳೆ ಎಂದಿದ್ದಾರೆ.