alex Certify ಮಧ್ಯಾಹ್ನದ ಹೆಲ್ತ್‌ ಬುಲೆಟಿನ್‌ ನಲ್ಲೇ ಕೊರೊನಾ ಶಾಕ್:‌ ಇಂದು ಒಂದೇ ದಿನ 178 ಸೋಂಕು ಪ್ರಕರಣ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯಾಹ್ನದ ಹೆಲ್ತ್‌ ಬುಲೆಟಿನ್‌ ನಲ್ಲೇ ಕೊರೊನಾ ಶಾಕ್:‌ ಇಂದು ಒಂದೇ ದಿನ 178 ಸೋಂಕು ಪ್ರಕರಣ ಪತ್ತೆ

ಮಹಾಮಾರಿ ಕೊರೊನಾ ಇಂದು ರಾಜ್ಯಕ್ಕೆ ಮತ್ತೆ ದೊಡ್ಡ ಶಾಕ್‌ ನೀಡಿದೆ. ಇಂದು ಮಧ್ಯಾಹ್ನದ ಹೆಲ್ತ್‌ ಬುಲೆಟಿನ್‌ ಬಿಡುಗಡೆಯಾಗಿದ್ದು, 178 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಸೋಂಕು ಪೀಡಿತರ ಸಂಖ್ಯೆ 2711 ಕ್ಕೆ ಏರಿಕೆಯಾಗಿದೆ.

ರಾಯಚೂರಿನಲ್ಲಿ 62 ಹಾಗೂ ಯಾದಗಿರಿಯಲ್ಲಿ 60 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನುಳಿದಂತೆ ಬೆಂಗಳೂರಿನಲ್ಲಿ 9 ಪ್ರಕರಣಗಳು ಕಂಡು ಬಂದಿವೆ. ಉಡುಪಿ 15, ಕಲಬುರಗಿಯಲ್ಲಿ 15, ಚಿಕ್ಕಬಳ್ಳಾಪುರ 4, ಮಂಡ್ಯದಲ್ಲಿ 2, ಶಿವಮೊಗ್ಗ 1, ದಾವಣಗೆರೆ 4, ಚಿತ್ರದುರ್ಗ 1, ಬೆಂಗಳೂರು ಗ್ರಾಮಾಂತರ 1, ಮೈಸೂರು 2 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಇಂದಿನ ಹೆಲ್ತ್‌ ಬುಲೆಟಿನ್‌ ನಲ್ಲೂ ಹೊರ ರಾಜ್ಯ ಅದರಲ್ಲೂ ಮಹಾರಾಷ್ಟ್ರದಿಂದ ಆಗಮಿಸಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿದ್ದಾರೆ. ಇನ್ನು ಸಂಜೆ ಬುಲೆಟಿನ್‌ ಪ್ರಕಟಗೊಂಡ ಬಳಿಕ ಇಂದಿನ ಸೋಂಕಿತರ ಸಂಖ್ಯೆ ದ್ವಿ ಶತಕ ಗಡಿ ದಾಟಲಿದೆಯಾ ಎಂಬ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಒಟ್ಟು ಸೋಂಕಿತರ ಸಂಖ್ಯೆ 3 ಸಾವಿರದ ಗಡಿ ಸಮೀಪಿಸುತ್ತಿರುವುದು ಆತಂಕ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...