alex Certify ಮದ್ಯ ಖರೀದಿಸಲು ಮುಜುಗರ ಪಡುವವರು ಹುಡುಕಿದ್ದಾರೆ ಹೊಸ ಐಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಖರೀದಿಸಲು ಮುಜುಗರ ಪಡುವವರು ಹುಡುಕಿದ್ದಾರೆ ಹೊಸ ಐಡಿಯಾ

ಕಳೆದ ಮೂರ‍್ನಾಲ್ಕು ದಿನಗಳಿಂದ ಮದ್ಯದ ಅಂಗಡಿಗಳು ತೆರೆದಿವೆ. ಷರತ್ತುಗಳನ್ನು ಹಾಕಿ ಮದ್ಯದಂಗಡಿ ತೆರೆಯಲು ಸರ್ಕಾರದಿಂದ ಅವಕಾಶ ಮಾಡಿಕೊಡಲಾಗಿದೆ. ಮೊದಲೆರಡು ದಿನ ಮದ್ಯದಂಗಡಿ ಮುಂದೆ ಕಿಲೊ ಮೀಟರ್ ಗಟ್ಟಲೆ ಸಾಲು ನಿರ್ಮಾಣವಾಗಿತ್ತು.

ಇನ್ನು ಈ ಮದ್ಯದಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ಬಹುತೇಕರು ಮದ್ಯ ವ್ಯಸನಿಗಳು ಎಂದು ಹೇಳಲಾಗುತ್ತಿದೆ. ಇದೊಂದು ವರ್ಗವಾದರೆ ಮತ್ತೊಂದು ವರ್ಗದವರಿದ್ದಾರೆ. ಇವರಿಗೆ ಮದ್ಯ ಬೇಕು ಆದರೆ ಸರದಿ ಸಾಲಿನಲ್ಲಿ ನಿಲ್ಲಲು ಮುಜುಗರ. ಹೀಗಾಗಿ ಇದಕ್ಕೂ ಒಂದು ದಾರಿಯನ್ನು ಹುಡುಕಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು, ಸರದಿ ಸಾಲಿನಲ್ಲಿ ನಿಂತು ಮುಜುಗರವಾಗುತ್ತೆ ಎನ್ನುವವರು ಕೂಲಿಯಾಳುಗಳ ಕೈಲಿ ಎಣ್ಣೆ ತರಿಸುತ್ತಾರಂತೆ. ಸರದಿ ಸಾಲಿನಲ್ಲಿ ನಿಂತು ಮದ್ಯ ತೆಗೆದುಕೊಂಡು ಬಂದರೆ ಗಂಟೆ ಲೆಕ್ಕದಲ್ಲಿ 50, 100 ರೂಪಾಯಿ ನೀಡುತ್ತಾರಂತೆ. ಈ ತರಹದ ಬ್ಯುಸಿನೆಸ್ ಕೂಡ ಇದೀಗ ಪ್ರಾರಂಭವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...