alex Certify ಮದ್ಯದಂಗಡಿ ಮುಂದೆ ಸಂಭ್ರಮಿಸಿದ ಮದ್ಯ ಪ್ರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದಂಗಡಿ ಮುಂದೆ ಸಂಭ್ರಮಿಸಿದ ಮದ್ಯ ಪ್ರಿಯರು

ರಾಜ್ಯಾದ್ಯಂತ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯ ಪ್ರಿಯರಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ.

ಬೆಳಿಗ್ಗೆ 9 ಗಂಟೆಯಿಂದಲೇ ಮದ್ಯದಂಗಡಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಮದ್ಯ ಖರೀದಿಸಿದ ಜನರಲ್ಲಿ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆಯಿಂದಲೆ ಮದ್ಯದಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದ ದೃಶ್ಯಕಂಡುಬಂದಿದೆ.

ಮದ್ಯ ಮಾರಾಟ ಮಳಿಗೆಗಳ ಬಳಿ ಜನಜಂಗುಳಿ ನೆರೆದಿದ್ದು ಪೊಲೀಸ್ ಭದ್ರತೆಯಲ್ಲಿ ಮದ್ಯ ಮಾರಾಟ ಮಾಡಲಾಗಿದೆ.ಬಹುತೇಕ ಮದ್ಯದಂಗಡಿಗಳ ಎದುರು ಜನಸಂದಣಿ ಕಂಡುಬಂದಿತು. ಹೆಚ್ಚುಕಡಿಮೆ ಒಂದೂವರೆ ತಿಂಗಳ ಬಳಿಕ ಮದ್ಯದ ರುಚಿ ನೋಡುವ ಧಾವಂತದಲ್ಲಿ ಜನ ಮುಗಿಬಿದ್ದು ಮದ್ಯ ಖರೀದಿಸಿದ್ದಾರೆ.

ಕೆಲವರು ಮದ್ಯ ಖರೀದಿಸಿ ಮನೆವರೆಗೂ ಹೋಗದೇ ಸಂದಿಗೊಂದಿಗಳಲ್ಲಿಯೇ ಮದ್ಯ ಸೇವಿಸಿದ್ದಾರೆ. ಕುಡುಕರಲ್ಲಿಯೂ ಶಿಸ್ತು ಕಂಡುಬಂದಿದ್ದು, ನಿಯಮಾನುಸಾರ ಮದ್ಯ ಖರೀದಿಸಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಮದ್ಯದಂಗಡಿ ಮಾಲೀಕರು ಕೂಡ ನಿಯಮಗಳನ್ನು ಪಾಲಿಸಿದ್ದು ಕಂಡುಬಂದಿತು. ಬ್ಯಾರಿಕೇಡ್‍ಗಳನ್ನು ನಿರ್ಮಿಸಿ ಕೇವಲ 5 ಜನರಂತೆ ಮಾತ್ರ ಖರೀದಿಸಲು ಅವಕಾಶ ನೀಡಲಾಗಿತ್ತು ಮತ್ತು ಸರ್ಕಾರದ ನಿರ್ದೆಶನದಂತೆ ಮದ್ಯ ಮಾರಾಟ ಮಾಡಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...