alex Certify ಬೆಚ್ಚಿಬೀಳಿಸುವಂತಿದೆ ಚಿತ್ರರಂಗದ ‘ಡ್ರಗ್ಸ್’ ದಂಧೆಯ ಕರಾಳ ಮುಖ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಚಿತ್ರರಂಗದ ‘ಡ್ರಗ್ಸ್’ ದಂಧೆಯ ಕರಾಳ ಮುಖ…!

ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಫ್ಲಾಟ್ ಒಂದರ ಮೇಲೆ ದಾಳಿ ಮಾಡಿ ಡ್ರಗ್ಸ್ ದಂಧೆಯ ಕಿಂಗ್ ಪಿನ್ ಅನಿಕಾ ಮತ್ತು ಆಕೆಯ ಸಹಚರರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅವರುಗಳು ಬಹಿರಂಗಪಡಿಸುತ್ತಿರುವ ವಿಷಯಗಳನ್ನು ಕೇಳಿ ಸ್ವತಃ ತನಿಖಾಧಿಕಾರಿಗಳೇ ದಂಗಾಗಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಅನಿಕಾ ವಿದ್ಯಾರ್ಥಿನಿಯಾಗಿದ್ದಾಗಲೇ ಮಾದಕ ವಸ್ತು ವ್ಯಸನಕ್ಕೆ ಬಿದ್ದಿದ್ದಳೆನ್ನಲಾಗಿದೆ. ಮುಂದೆ ಆಕೆಯೇ ಡ್ರಗ್ಸ್ ಪೂರೈಕೆ ಮಾಡಲು ಮುಂದಾಗಿದ್ದು, ಚಿತ್ರರಂಗದ ಕೆಲ ನಟ – ನಟಿಯರು, ಶ್ರೀಮಂತ ಯುವಕರು ಅನಿಕಾಳ ಖಾಯಂ ಗಿರಾಕಿಗಳಾಗಿದ್ದರೆಂದು ಹೇಳಲಾಗಿದೆ.

ಶಾಕಿಂಗ್ ಸಂಗತಿಯೆಂದರೆ ಕೆಲ ನಟಿಯರು ಡ್ರಗ್ಸ್ ಸೇವನೆ ತಮ್ಮನ್ನು ಚಿರ ಯೌವ್ವನಿಗರಾಗಿಡುತ್ತದೆ ಎಂಬ ಭ್ರಮೆಯಿಂದ ಇದರ ಮೊರೆ ಹೋಗಿದ್ದಾರೆಂದು ಹೇಳಲಾಗಿದೆ. ಪಾರ್ಟಿಗಳು ಆಯೋಜನೆಗೊಂಡ ಅನಿಕಾ ಮತ್ತಾಕೆಯ ಸಹಚರರು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರೆಂದು ಹೇಳಲಾಗಿದೆ.

ವಿಚಾರಣೆ ವೇಳೆ ಇವರುಗಳ ಹೆಸರು ಬಾಯ್ಬಿಟ್ಟಿರುವ ನಟ-ನಟಿಯರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ಅಧಿಕಾರಿಗಳ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...