ಕೊರೊನಾದಿಂದಾಗಿ ಕಂಗೆಟ್ಟಿದ್ದ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಸರ್ಕಾರ ಸಾಲ ನೀಡುವ ಮೂಲಕ ಆರ್ಥಿಕವಾಗಿ ಸಬಲೀಕರಣ ಮಾಡಲು ಸರ್ಕಾರ ಮುಂದಾಗಿದೆ. ಬಡವರ ಬಂಧು ಯೋಜನೆ ಹೆಸರಿನಲ್ಲಿ ಇವರಿಗೆ ಸಾಲ ಸೌಲಭ್ಯ ನೀಡಲು ಸರ್ಕಾರ ಮುಂದೆ ಬಂದಿದ್ದು, ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ತಳ್ಳುಬಂಡಿ ಇಟ್ಟುಕೊಂಡು ತರಕಾರಿ, ಹೂ, ಕಾಯಿ ಮಾರಾಟ ಮಾಡುವವರು, ಆಟೊಗಳಲ್ಲಿ ತಿಂಡಿ, ಊಟ ಹಾಗೂ ಪಾನೀಯ ಪದಾರ್ಥಗಳನ್ನು ಮಾರಾಟ ಮಾಡುವವರು ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯಡಿ ಸಾಲ ಪಡೆಯಬಹುದು. ನೋಂದಾಯಿತ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಇನ್ನು ಇವರಿಗೆ 3 ಸಾವಿರದಿಂದ 10 ಸಾವಿರ ರೂಪಾಯಿಯವರೆಗೆ ಸಾಲ ನೀಡಲಾಗುತ್ತದೆ. ಈ ಸಣ್ಣ ವ್ಯಾಪಾರಿಗಳು ಡಿಸಿಸಿ ಬ್ಯಾಂಕ್‌ಗಳು, ಮಹಿಳಾ ಸಹಕಾರಿ ಬ್ಯಾಂಕ್‌ಗಳು, ಪಟ್ಟಣ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಬಹುದು. ಸಹಕಾರಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆದು ಈ ಬ್ಯಾಂಕ್‌ಗಳು ನಿಗಧಿಪಡಿಸಿರುವ ಅರ್ಜಿಯನ್ನು ತುಂಬಿ ಕೇಳುವ ದಾಖಲಾತಿಗಳೊಂದಿಗೆ ನೀಡಬೇಕು. ಸಾಲ ಪಡೆದ ಆರು ತಿಂಗಳವರೆಗೆ ಮರುಪಾವತಿಗೆ ಸಮಯ ಇದೆ. ಇನ್ನು ಯಾವುದೇ ಬಡ್ಡಿ ಕಟ್ಟುವಂತಿಲ್ಲ.