ಬೆಂಗಳೂರು: ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ನಿವಾಸದ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ಪತ್ರ, ಮದ್ಯದ ಬಾಟಲ್ ಗಳು, ಕಂತೆ, ಕಂತೆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೇವೇಂದ್ರಪ್ಪ ಅವರ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳಿಗೆ ಬಿಬಿಎಂಪಿ ನಗರ ಯೋಜನೆ ವಿಭಾಗಕ್ಕೆ ಸೇರಿದ 430ಕ್ಕೂ ಹೆಚ್ಚು ಕಡತಗಳು, ಹಿರಿಯ ಅಧಿಕಾರಿಗಳ ಹೆಸರಿನ ಸೀಲ್ ಗಳು, 120 ಲೀಟರ್ ಪ್ರಮಾಣದ ಬೆಲೆ ಬಾಳುವ ಮದ್ಯದ ಬಾಟಲ್ ಗಳು ಸೇರಿದಂತೆ ಬೆಲೆ ಬಾಳುವ ಕಾರುಗಳು ಪತ್ತೆಯಾಗಿವೆ.
ರೈತ ಪ್ರತಿಭಟನೆ: ವದಂತಿ ಹಬ್ಬಿಸುವ ಟ್ವಿಟರ್ ಖಾತೆಗಳ ಬ್ಯಾನ್ಗೆ ಐಟಿ ಸಚಿವಾಲಯ ಆದೇಶ
ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿಯವರಿಗೆ ಸೇರಿದ ಸ್ವತ್ತಿನಲ್ಲಿ ಬ್ರಿವರೀಸ್ ಘಟಕ ಆರಂಭಿಸಲು ಪೂರ್ಣಗೊಂಡ ಕಟ್ಟಡ ಕಾಮಗಾರಿಗೆ ಸರ್ಟಿಫಿಕೆಟ್ ನೀಡಲು ದೇವೇಂದ್ರಪ್ಪ 40 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ದೇವೇಂದ್ರಪ್ಪ ಬರೋಬ್ಬರಿ 20 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದರು.