alex Certify ಬಿಗ್‌ ನ್ಯೂಸ್: ಕೆಪಿಎಲ್ ಗೂ ಡ್ರಗ್ಸ್ ದಂಧೆ ಲಿಂಕ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ಕೆಪಿಎಲ್ ಗೂ ಡ್ರಗ್ಸ್ ದಂಧೆ ಲಿಂಕ್…?

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಕೆಪಿಎಲ್ ಗೂ ಅಂಟಿಕೊಂಡಿತ್ತಾ ಎಂಬ ಅನುಮಾನ ಮೂಡಿದೆ. ಕೆಪಿಎಲ್ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್ ಮಾಡಿ ಹಲವರು ಬಂಧನಕ್ಕೀಡಾಗಿದ್ದರು. ಅಲ್ಲದೇ ಹನಿಟ್ರ್ಯಾಪ್ ಪ್ರಕರಣ ಕೂಡ ನಡೆದಿತ್ತು. ಈ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಬಳ್ಳಾರಿ ಟಸ್ಕರ್ಸ್ ತಂಡದ ಸಹ ಮಾಲೀಕರಾಗಿದ್ದು, ಆ ತಂಡದ ಕೆಲವರಿಗೆ ಡ್ರಗ್ಸ್ ಜಾಲದ ಲಿಂಕಿದೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಲ್ಲದೇ ಕೆಪಿಎಲ್ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್ ಹಾಗೂ ಹನಿಟ್ರ್ಯಾಪ್ ನಡೆದಿದ್ದು, ಈ ಪ್ರಕರಣದಲ್ಲಿ ಹಲವು ಆಟಗಾರರು ಬಂಧನಕ್ಕೀಡಾಗಿದ್ದರು. ಈ ಹನಿಟ್ರ್ಯಾಪ್ ಕೇಸ್ ನಲ್ಲಿ ಹಲವು ಮಾಡೆಲ್ ಗಳು ಮತ್ತು ನಟಿಯರು ಕೂಡ ಭಾಗಿಯಾಗಿದ್ದರು.

ಈ ನಿಟ್ಟಿನಲ್ಲಿ ನಟಿ ರಾಗಿಣಿ ಜತೆಗೆ ಸಂಪರ್ಕದಲ್ಲಿದ್ದ ಕೆಪಿಎಲ್ ಆಟಗಾರರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...