alex Certify ಫಾರಿನರ್ಸ್ ಕೊರಿಯರ್ ಜಾಡು ಹಿಡಿದ ಪೊಲೀಸರು; ಸಿಸಿಬಿ ಬಲೆಗೆ ಬಿದ್ದ ಸಾಫ್ಟ್ ವೇರ್ ಇಂಜಿನಿಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಾರಿನರ್ಸ್ ಕೊರಿಯರ್ ಜಾಡು ಹಿಡಿದ ಪೊಲೀಸರು; ಸಿಸಿಬಿ ಬಲೆಗೆ ಬಿದ್ದ ಸಾಫ್ಟ್ ವೇರ್ ಇಂಜಿನಿಯರ್

ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಸಿಸಿಬಿ ಸಮರ ಮುಂದುವರೆದಿದ್ದು, ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಟೆಕ್ಕಿಯೋರ್ವನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ಸಾಫ್ಟ್ ವೇರ್ ಇಂಜಿನಿಯರ್ ಸಾರ್ಥಕ್ ಆರ್ಯಾ ಎಂದು ತಿಳಿದುಬಂದಿದೆ. ಈತ ವಿದೇಶಿಗರ ಪೋಸ್ಟ್ ಮೂಲಕ ನಗರಕ್ಕೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಹೀಗಾಗಿ ಫಾರಿನರ್ಸ್ ಪೋಸ್ಟ್ ಕೊರಿಯರ್ ಮೇಲೆ ಸಿಸಿಬಿ ಪೊಲೀಸರು ನಿಗಾ ಇಟ್ಟಿದ್ದರು.

ಕೊರಿಯರ್ ಜಾಡು ಹಿಡಿದ ಸಿಸಿಬಿ ಪೊಲೀಸರು, ಹೆಚ್ಎಸ್ಆರ್ ಲೇಔಟ್ ಮನೆ ಮೇಲೆ ದಾಳಿ ನಡೆಸಿದ್ದು, ವಿದೇಶಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಸಾರ್ಥಕ್ ಆರ್ಯಾನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 4.90 ಗ್ರಾಂ ಎಲ್ಎಸ್ ಡಿ, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೇಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೇಟ್ ಸೇರಿದಂತೆ ಹಲವು ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...